ಕುಂಭಮೇಳದ ಪರಿಣಾಮ : ಉತ್ತರಾಖಂಡದ ಕೋವಿಡ್ ಪ್ರಕರಣಗಳಲ್ಲಿ 1800 ಶೇಕಡಾ ಏರಿಕೆ !

Prasthutha: April 28, 2021

ಹರಿದ್ವಾರ : ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ ಹಠಕ್ಕೆ ಬಿದ್ದಂತೆ ಉತ್ತರಾಖಂಡದಲ್ಲಿ ಕುಂಭಮೇಳ ನಡೆಸಿ ಲಕ್ಷಾಂತರ ಭಕ್ತರು ಕಿಕ್ಕಿರಿದು ಸೇರಿದ್ದರು. ಇದೀಗ ಅದರ ಪರಿಣಾಮ ಕಂಡು ಬಂದಿದೆ. ಉತ್ತರಾ ಖಂಡದಲ್ಲಿ ಕೋವಿಡ್ ಪ್ರಕರಣಗಳು ಎಪ್ರಿಲ್ ತಿಂಗಳ ಮೊದಲ ದಿನದಿಂದ 24 ರ ವರೆಗೆ 1800% ಏರಿಕೆ ಕಂಡಿದೆ ಎಂದು ತಿಳಿದು ಬಂದಿದೆ.

ಕುಂಭ ಮೇಳಕ್ಕಿಂತ ಮೊದಲು ಅಂದರೆ ಮಾರ್ಚ್ 31 ರ ವರೆಗೆ ಉತ್ತರಾಖಂಡದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,863 ಇತ್ತು ಆದರೆ ಆ ಬಳಿಕ ಅದು 33, 330 ಅಂದರೆ 1800% ಏರಿಕೆಯಾಗಿದೆ. ಕುಂಭಮೇಳದಲ್ಲಿ 40 ಲಕ್ಷಕ್ಕೂ ಅಧಿಕ ಭಕ್ತರು ಸೇರಿದ್ದರು ಎನ್ನಲಾಗಿದೆ. ಸರಕಾರ ಅಧಿಕೃತ ಅಂಕಿಅಂಶಗಳ ಪ್ರಕಾರ 35 ಲಕ್ಷ ಜನ ಸೇರಿದ್ದರು.

ರಾಜ್ಯದ ಸಚಿವ ಸುಬೋಧ್ ಯುನಿಯಾಲ್ ಅವರು, “ನಾವು ನಮ್ಮಿಂದಾಗುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ರಾಜ್ಯಕ್ಕೆ ಬರುತ್ತಿರುವ ಪ್ರವಾಸಿಗರಿಂದಾಗಿ ಈ ಪರಿಸ್ಥಿತಿ ಬಂದು ತಲುಪಿದೆ” ಎಂದು ಹೇಳಿಕೆ ನೀಡಿದ್ದಾರೆ. ನಿನ್ನೆ ಕೂಡಾ ಸಾವಿರಾರು ಮಂದಿ ಶಾಹಿ ಸ್ನಾನದಲ್ಲಿ ಭಾಗವಹಿಸಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!