ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನಿರಾಕರಿಸಿದ ಮಂಗಳೂರಿನ ಖಾಸಗಿ ಆಸ್ಪತ್ರೆ | ಪ್ರಧಾನಿ ಸಚಿವಾಲಯದಿಂದ ದಂಡ

Prasthutha|

ಮಂಗಳೂರು : ಆಯುಷ್ಮಾನ್ ಯೋಜನೆಯಡಿ ಚಿಕತ್ಸೆ ನೀಡರೆ, ಬಡ ರೋಗಿಯೊಬ್ಬರಿಗೆ ಲಕ್ಷಾಂತರ ರೂ. ಬಿಲ್ ನೀಡಿರುವುದಕ್ಕೆ ಸಂಬಂಧಿಸಿದ ದೂರನ್ನಾಧರಿಸಿ, ಪ್ರಧಾನಿ ಸಚಿವಾಲಯ ಮಂಗಳೂರಿನ ಆಸ್ಪತ್ರೆಯೊಂದಕ್ಕೆ 12,96,320 ರೂ. ದಂಡ ವಿಧಿಸಿದ ಘಟನೆ ನಡೆದಿದೆ.

- Advertisement -

ಪಣಂಬೂರಿನ ವ್ಯಕ್ತಿಯೊಬ್ಬರು ಅಪಘಾತಕ್ಕೊಳಗಾಗಿ ಫೆಬ್ರವರಿ ತಿಂಗಳಿನಲ್ಲಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆಯುಷ್ಮಾನ್ ಯೋಜನೆಯಡಿ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಬೇಕಾಗಿತ್ತು. ಆದರೆ, ಚಿಕಿತ್ಸೆಗೆ ನಿರಾಕರಿಸಿದ ಬಗ್ಗೆ ಆಸ್ಪತ್ರೆ ವಿರುದ್ಧ ಪ್ರಧಾನಿ ಸಚಿವಾಲಯಕ್ಕೆ ದೂರು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಸಚಿವಾಲಯವು ಈಗ ಆಸ್ಪತ್ರೆಗೆ ದಂಡ ವಿಧಿಸಿದೆ. ಅಲ್ಲದೆ, ಬಿಲ್ ಪಾವತಿಸಿದ ರೋಗಿಗೆ ಹಣ ಹಿಂದಿರುಗಿಸುವಂತೆ ಆದೇಶಿಸಿದೆ ಎಂದು ವರದಿಯೊಂದು ತಿಳಿಸಿದೆ.   

Join Whatsapp