ಫಿಫಾ ವಿಶ್ವಕಪ್’ಗೆ ಆತಿಥ್ಯ: ಕತಾರ್’ಗೆ ಯುಎಇ ಅಧ್ಯಕ್ಷರಿಂದ ಅಭಿನಂದನೆ

Prasthutha|

ಅಬುಧಾಬಿ: ಫಿಫಾ ವಿಶ್ವಕಪ್’ಗೆ ಆತಿಥ್ಯ ವಹಿಸಿದ ಕತಾರ್ ಮತ್ತು ಅಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅಭಿನಂದಿಸಿದ್ದಾರೆ.

- Advertisement -

ವಿಶ್ವಕಪ್’ಗೆ ಆತಿಥ್ಯ ವಹಿಸಿದ್ದಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ ಮತ್ತು ಈ ಪಂದ್ಯಾಕೂಟವನ್ನು ಯಶಸ್ಸುಗೊಳಿಸಲು ಯುಎಇ ಬೆಂಬಲ ಸೂಚಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಅವರಿಗೆ ತಿಳಿಸಿದರು.

ಇದು ಕತಾರ್ ಮತ್ತು ಅರಬ್ ಜಗತ್ತಿನ ಅತ್ಯುತ್ತಮ ಸಾಧನೆಯಾಗಿದೆ ಎಂದು ಅವರು ತಿಳಿಸಿದರು. ಕತಾರ್’ಗೆ ಬೆಂಬಲ ಸೂಚಿಸಿದ ಯುಎಇ ನಡೆಗೆ ಕತಾರ್ ದೊರೆ ಎಮಿರ್ ಶೇಖ್ ಝಾಯೆದ್ ಧನ್ಯವಾದ ಸಮರ್ಪಿಸಿದ್ದಾರೆ.

Join Whatsapp