ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಫೇಸ್ ಬುಕ್ ನಿಂದ ಅನಿರ್ದಿಷ್ಟಾವಧಿಗೆ ನಿಷೇಧಿಸಲಾಗಿದೆ ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಹೇಳಿದ್ದಾರೆ.
ಇಂತಹ ಸಮಯದಲ್ಲಿ ಅಧ್ಯಕ್ಷರು ನಮ್ಮ ಸೇವೆಯನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವುದು ಅಪಾಯಕಾರಿ ಎಂದು ನಾವು ನಂಬಿದ್ದೇವೆ. ಹೀಗಾಗಿ ಟ್ರಂಪ್ ಅವರ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳ ಅಮಾನತನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದೇವೆ. ಅಧಿಕಾರ ಹಸ್ತಾಂತರ ಶಾಂತಿಯುತವಾಗಿ ನಡೆಯುವ ತನಕವಾದರೂ, ಈ ಅಮಾನತು ಮುಂದುವರಿಯಲಿದೆ ಎಂದು ಝುಕರ್ ಬರ್ಗ್ ಹೇಳಿದ್ದಾರೆ.
ಟ್ವಿಟರ್ ಬುಧವಾರ ಟ್ರಂಪ್ ಖಾತೆಯನ್ನು 12 ಗಂಟೆಗಳ ಕಾಲ ಅಮಾನತು ಮಾಡಿತ್ತು. ಗುರುವಾರ ಅಮಾನತು ಹಿಂಪಡೆದಿತ್ತು. ಟ್ರಂಪ್ ಟ್ವೀಟ್ ಮಾಡುವುದನ್ನು ವಿಡಿಯೊ ಶೇರ್ ಮಾಡುವುದನ್ನು ಮತ್ತೆ ಆರಂಭಿಸಿದ್ದರು.