ಉ.ಪ್ರ.ದಲ್ಲಿ ಮತ್ತೊಂದು ಭೀಕರ ಅತ್ಯಾಚಾರ | ಗನ್ ಹಿಡಿದು ಯುವತಿಯ ಅತ್ಯಾಚಾರ ಎಸಗಿ ಟೆರೇಸ್ ನಿಂದ ತಳ್ಳಿದ ದುಷ್ಟ

Prasthutha|

ಮೊರದಾಬಾದ್ : ಉತ್ತರ ಪ್ರದೇಶದಲ್ಲಿ ಕಾನೂನಿನ ಭಯವೇ ಇಲ್ಲದೆ ಕ್ರಿಮಿನಲ್ ಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಅಲ್ಲಿನ ಮೊರದಾಬಾದ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ದುಷ್ಟನೊಬ್ಬ, ಟೆರೇಸ್ ನಿಂದ ಆಕೆಯನ್ನು ತಳ್ಳಿ ಹಾಕಿ ಹತ್ಯೆಗೆ ಯತ್ನಿಸಿದ್ದಾನೆ.

- Advertisement -

ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಅರವಿಂದ ಸಿಂಗ್ ಟೆರೇಸ್ ಮೂಲಕ ಮಗಳ ಕೋಣೆಗೆ ನುಗ್ಗಿ ಗನ್ ಹಿಡಿದು ಬೆದರಿಕೆಯೊಡ್ಡಿ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ. ಯುವತಿಯು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯನ್ನು ಟೆರೇಸ್ ನಿಂದ ತಳ್ಳಿ ದುಷ್ಕರ್ಮಿ ಪರಾರಿಯಾಗಿದ್ದಾನೆ.

ಯುವತಿಯ ಬೊಬ್ಬೆ ಕೇಳಿ ಧಾವಿಸಿದ ಮನೆಯವರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಯುವತಿಯ ಬೆನ್ನು ಮೂಲೆ ಮುರಿದಿದ್ದು, ತಲೆ, ದೇಹದ ಭಾಗಗಳಿಗೆ ಗಾಯಗಳಾಗಿವೆ. ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Join Whatsapp