ಮಗುವನ್ನು ಕೊಂದು ಬೋರ್ ವೆಲ್ ಗೆ ಹಾಕಿದ ತಂದೆ: ಪತ್ನಿಯ ಮೇಲೆ ಶಂಕೆಯಿಂದ ದುಷ್ಕೃತ್ಯ ನಡೆಸಿದ ಪತಿಯ ಬಂಧನ

Prasthutha|

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗದ ಆಲಖನೂರು ಎಂಬಲ್ಲಿ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದ ಮಗು ಬೋರ್ ವೆಲ್ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಈ ಮಧ್ಯೆ ಮಗುವಿನ ಸಾವಿನ ಕುರಿತು ಪೊಲೀಸರಿಗೆ ಸಂಶಯ ವ್ಯಕ್ತವಾಗಿ, ಮಗುವಿನ ತಂದೆಯನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ನಡೆಸಿದ ನಂತರ ಬೋರ್ ವೆಲ್ ಎಸೆದಿರುವುದು ತನಿಖೆಯಿಂದ ಬಹಿರಂಗವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ಕೊಲೆಯಾದ ಮಗುವಿನ ತಂದೆ ಸಿದ್ದಪ್ಪ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆತ ತನ್ನ ಪತ್ನಿಯ ಮೇಲಿನ ಶಂಕೆಯಿಂದ ಈ ದುಷ್ಕ್ರತ್ಯ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅನೈತಿಕ ಸಂಬಂಧದಿಂದ ಹುಟ್ಟಿದ ನೆಲೆಯಲ್ಲಿ ಮಗುವನ್ನು ಕೊಲೆಮಾಡಿದ ನಂತರ ಯಾರಿಗೂ ಸಂಶಯ ಬಾರದಿರಲು ಈ ರೀತಿ ಮಾಡಿರುವುದಾಗಿ ಪೊಲೀಸರ ಬಳಿ ತಿಳಿಸಿದ್ದಾನೆ.

- Advertisement -

ಅನೈತಿಕ ಸಂಬಂಧ ವಿಚಾರದ ಹಿನ್ನೆಲೆಯಲ್ಲಿ ಈ ಹಿಂದೆ ಸಿದ್ದಪ್ಪ ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮದ ಮುಖಂಡರು ಮತ್ತು ಕುಟುಂಬಸ್ಥರು ಸೇರಿ ರಾಜಿ ಪಂಚಾಯಿತಿ ಕೂಡ ನಡೆಸಿದ್ದರು. ಆದರೂ ಸುಧಾರಿಸಿಕೊಳ್ಳದ ಈ ಸಮಸ್ಯೆಯಿಂದಾಗಿ ಸಿದ್ದಪ್ಪ ಮಗುವನ್ನು ಕಂಡರೆ ರೇಗುತ್ತಿದ್ದ ಎಂದು ಆತನ ಪತ್ನಿ ಪೊಲೀಸರಿಗೆ ತಿಳಿಸಿದ್ದಾಳೆ. ಪತ್ನಿಯ ಈ ಹೇಳಿಕೆಯನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಆರೋಪಿ ಸಿದ್ದಪ್ಪನ ಈ ದುಷ್ಕ್ರತ್ಯ ಬೆಳಕಿಗೆ ಬಂದಿದೆ.

ಸದ್ಯ ಹಾರೂಗೇರಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

- Advertisement -