ಜಾರ್ಖಂಡ್ ನಲ್ಲಿ ಕರ್ಮಪೂಜೆ ನಿರ್ವಹಣೆಗೆ ಕೆರೆಗಿಳಿದ 7 ಯುವತಿಯರು ಮುಳುಗಿ ಸಾವು

Prasthutha|

ರಾಂಚಿ: ಕರ್ಮಪೂಜೆ ನಿರ್ವಹಿಸಲು ಕೆರೆಗೆ ಇಳಿದ 7 ಮಂದಿ ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಾರ್ಖಂಡ್ ನ ಲತೇಹರ್ ಜಿಲ್ಲೆಯಿಂದ ವರದಿಯಾಗಿದೆ. ಮೃತರು 12 ರಿಂದ 20 ಪ್ರಾಯದವರಾಗಿದ್ದು, ಪೂಜೆಯ ಸಾಮಾಗ್ರಿಗಳನ್ನು ವಿಸರ್ಜನೆ ನಡೆಸಲು ಕೆರೆಗೆ ಇಳಿದಾಗ ದುರಂತ ನಡೆದಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

- Advertisement -

ಮೊದಲಿನ ಸಾಲಿನಲ್ಲಿ 10 ಮಂದಿ “ಕರ್ಮದಾಲಿ” ವಿಸರ್ಜನೆ ನಡೆಸಲು ಕೆರೆಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಒಬ್ಬಾಕೆ ಕಾಲು ಜಾರಿ ನೀರಿಗೆ ಬಿದ್ದಾಗ ಆಕೆಯ ರಕ್ಷಣೆಗೆ ಉಳಿದವರು ಮುಂದೆ ಬಂದಾಗ ನೀರಿನ ಸೆಳೆತಕ್ಕೆ ಸಿಕ್ಕಿ 7 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಜಾರ್ಖಂಡ್ ನಲ್ಲಿ ಆದಿವಾಸಿಗಳು ಬಹಳ ಉತ್ಸಾಹದಿಂದ ಕರ್ಮ ಪೂಜೆಯನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ದುರಂತ ಘಟನೆ ನಡೆದಿರುವುದು ಖೇದಕರ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾತ್ರವಲ್ಲ ಮೃತರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ಪರಿಹಾರವನ್ನು ಘೋಷಣೆ ಮಾಡಲಾಗಿದೆ.
ಬಲಮಠ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಮುಂದುವರಿಸಿದ್ದಾರೆ

Join Whatsapp