ನವದೆಹಲಿ : ರೈತರು ದೆಹಲಿಯ ಕೆಂಪುಕೋಟೆ ಹತ್ತಿ ಧ್ವಜಸ್ತಂಭವೊಂದರ ಮೇಲೆ ಹಾರಿಸಿರುವ ಧ್ವಜ ‘ನಿಶಾನ್ ಸಾಹಿಬ್’ ಧ್ವಜ ಎಂದು ಸ್ಪಷ್ಟವಾಗಿದೆ. ರೈತರ ಹೋರಾಟ ತೀವ್ರಗೊಂಡು ಕೆಂಪುಕೋಟೆ ಹತ್ತಿದ ಗುಂಪೊಂದು ವಿವಿಧ ಧ್ವಜಗಳನ್ನು ಪ್ರದರ್ಶಿಸಿತ್ತು.
ಈ ವೇಳೆ ಕೆಲವು ಯುವಕರು ಕೆಂಪುಕೋಟೆ ಮೇಲಿನ ಧ್ವಜಸ್ತಂಭವೊಂದರ ಮೇಲೆ ‘ನಿಶಾನ್ ಸಾಹಿಬ್’ ಮತ್ತು ರೈತ ಧ್ವಜವೊಂದನ್ನು ಹಾರಿಸಿದ್ದಾರೆ. ಕೆಂಪುಕೋಟೆ ಗೋಪುರದ ಮೇಲೂ ಈ ಧ್ವಜ ಹಾರಿಸಲಾಗಿದೆ.
ಆದರೆ, ಕೆಲವು ಮಾಧ್ಯಮಗಳು ಆತುರಾತುರವಾಗಿ ಇದು ಉಗ್ರವಾದಿ ಖಲಿಸ್ತಾನ್ ಧ್ವಜವೆಂದು ಪ್ರಚಾರ ನಡೆಸಿದ್ದವು. ಇದೀಗ ಇದು ‘ನಿಶಾನ್ ಸಾಹಿಬ್’ ಧ್ವಜ ಎಂಬುದು ದೃಢಪಟ್ಟಿದೆ. ‘ನಿಶಾನ್ ಸಾಹಿಬ್’ ಸಿಖ್ಖ್ ಧರ್ಮಕ್ಕೆ ಸಂಬಂಧಿಸಿದ ಧ್ವಜವಾಗಿದೆ.