ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ, ಪ್ರತಿಭಟನೆ ನಡೆಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಡುವುದರ ಜೊತೆಗೆ, ಸದ್ಯಕ್ಕೆ ಕಾನೂನನ್ನು ತಡೆ ಹಿಡಿದರೆ ಒಳ್ಳೆಯದು ಎಂದು ಸಲಹೆ ನೀಡಿದೆ.
ಕೇಂದ್ರವು ಹೊಸ ಕಾನೂನುಗಳನ್ನು ತಡೆ ಹಿಡಿದು, ಪಿ.ಸಾಯಿನಾಥರಂತಹ ತಜ್ಞರನ್ನೊಳಗೊಂಡ ಸ್ವತಂತ್ರ ಮತ್ತು ಪಾರದರ್ಶಕ ಸಮಿತಿ ರಚಿಸಿ, ಅದಕ್ಕೆ ವರ್ಗಾಯಿಸುವಂತೆ ಕೋರ್ಟ್ ಸೂಚಿಸಿದೆ.
ಸಿಜೆಐ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.