ಕೇರಳ ಸ್ಥಳೀಯಾಡಳಿತ ಚುನಾವಣೆ | ಯುಡಿಎಫ್ ಮೈತ್ರಿ ಪಕ್ಷ ವೆಲ್ಫೇರ್ ಪಾರ್ಟಿಗೆ 65 ಸ್ಥಾನಗಳಲ್ಲಿ ಜಯ

Prasthutha|

ತಿರುವನಂತಪುರಂ : ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದಲ್ಲಿ ವೆಲ್ಫೇರ್ ಪಾರ್ಟಿ ಗಮನಾರ್ಹ ಸಾಧನೆ ಪ್ರದರ್ಶಿಸಿದೆ. ನಿನ್ನೆ ಹೊರಬಿದ್ದಿರುವ ಫಲಿತಾಂಶದಲ್ಲಿ ವೆಲ್ಫೇರ್ ಪಕ್ಷದ ಅಭ್ಯರ್ಥಿಗಳು ಕಾರ್ಪೊರೇಶನ್ ನಲ್ಲಿ 1, ಬ್ಲಾಕ್ ಪಂಚಾಯತಿಯಲ್ಲಿ 1, ಮುನ್ಸಿಪಾಲಿಟಿಯಲ್ಲಿ 14 ಸ್ಥಾನಗಳು ಮತ್ತು ಗ್ರಾಮ ಪಂಚಾಯತಿಯಲ್ಲಿ 49 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದಾರೆ.

ಒಟ್ಟು 65 ಮಂದಿ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಿರುವ ಬಗ್ಗೆ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

- Advertisement -

ಕೇರಳ ಸ್ಥಳೀಯಾಡಳಿತ ಚುನಾವಣೆಯಲ್ಲಿ ವೆಲ್ಫೇರ್ ಪಾರ್ಟಿ ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಪಕ್ಷದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಪಕ್ಷವು ಯುಡಿಎಫ್ ಮಿತ್ರಕೂಟದೊಂದಿಗೆ ಮೈತ್ರಿ ನಡೆಸಿಕೊಂಡು ಚುನಾವಣೆ ಎದುರಿಸಿತ್ತು.  

- Advertisement -