ನವದೆಹಲಿ : ಕಳೆದ 52 ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನವನ್ನು ಸರ್ಕಾರ ಹಾಗೂ ಮಾಧ್ಯಮಗಳು ಮಾಡುತ್ತಲೇ ಬಂದಿವೆ. ಇದೇ ಕಾರಣಕ್ಕೆ ಹೋರಾಟ ನಿರತ ರೈತರು ಕೆಲವು ಮಾಧ್ಯಮ ಸಂಸ್ಥೆಗಳನ್ನು, ‘ಗೋದಿ ಮೀಡಿಯಾ’ ಎಂದು ಟೀಕಿಸಿ ಅವುಗಳಿಗೆ ಪ್ರತಿಕ್ರಿಯಿಸುವುದನ್ನು ನಿರಾಕರಿಸಿದ್ದವು.
ಜ. 15ರಂದು ಬೆಳಗ್ಗೆ ಝೀ ನ್ಯೂಸ್ ಸುದ್ದಿವಾಹಿನಿ, “ರೈತ ಹೋರಾಟ; ಖಾಲಿಸ್ತಾನದ ಯೋಜನೆ” ಎಂಬ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡುವ ಮೂಲಕ ತೀವ್ರವಾದ ಟೀಕೆಗೆ ಗುರಿಯಾಗಿದೆ.
ಕಿಸಾನ್ ಏಕ್ತಾ ಮೋರ್ಚಾದ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಭ್ರಷ್ಟ ಹಾಗೂ ವಿಷಯ ಹರಡುವ ಪತ್ರಿಕೋದ್ಯಮದಿಂದ ಎಚ್ಚರವಾಗಿರಿ, ‘ಗೋದಿ ಮೀಡಿಯಾ’ದ ಪಕ್ಷಪಾತ ಎಲ್ಲರಿಗೂ ತಿಳಿದಿರುವುದೇ ಎಂದು ಪ್ರತಿಕ್ರಿಯಿಸಿದೆ.
‘ಝೀ ನ್ಯೂಸ್’ ತಮ್ಮ ಸಂಸ್ಥಾಪಕ ಸುಭಾಷ್ ಚಂದ್ರ ರಾಜ್ಯಸಭೆ ಸದಸ್ಯರಾದಾಗ ಯೆಸ್ ಬ್ಯಾಂಕ್ ಬಗ್ಗೆ ಏನು ಹೇಳಿದರು ಎಂದು ಪ್ರಶ್ನಿಸಿದೆ.
ಇನ್ನೊಂದು ಟ್ವೀಟ್ ನಲ್ಲಿ, ‘ಝೀನ್ಯೂಸ್’ ಪ್ರಕಟಿಸಿದ ಕೆನಡಾದಲ್ಲಿ ಕುಳಿತಿರುವ ಪ್ರತ್ಯೇಕತಾವಾದಿ ಸಂಘಟನೆ ರೈತ ಹೋರಾಟದಲ್ಲಿ ರೈತ ನಾಯಕರು ಏನು ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ನಿರ್ಧರಿಸುತ್ತಾರಾ? ಎಂದು ಪ್ರಶ್ನಿಸಿದ್ದ ವಿಶ್ಲೇಷಣೆಗೆ ಪ್ರತಿಕ್ರಿಯಿಸಿ, “ತಿಹಾರದಿಂದ ಹೊರಬಂದ ದಲ್ಲಾಳಿ ರೈತ ಏನು ಮಾಡಬೇಕು ಎಂಬುದನ್ನುನಿರ್ಧಾರಿಸುತ್ತಾನಾ?” ಎಂದು ಕಟುವಾಗಿ ಪ್ರತಿಕ್ರಿಯಿಸಿದೆ. ದಲ್ಲಾಳಿಗಳನ್ನು ನಂಬಬೇಡಿ ಎಂದು ಎಚ್ಚರಿಸಿದೆ.
‘ಝೀ ನ್ಯೂಸ್’ ನಲ್ಲಿ ಬಿತ್ತರವಾದ ವಿಶೇಷ ಕಾರ್ಯಕ್ರಮ ಮತ್ತು ಅದರ ಸಹೋದರ ಸಂಸ್ಥೆಯಾದ ಡಿಎನ್‌ಎ ಪತ್ರಿಕೆಯಲ್ಲಿ ವಿಶ್ಲೇಷಣೆಗಳೆರಡು ಹೋರಾಟವನ್ನು ತಪ್ಪಾಗಿ ವ್ಯಾಖ್ಯಾನಿಸುವ ಪ್ರಯತ್ನ ಎಂದು ರೈತ ನಾಯಕರು ‘ಝೀ ನ್ಯೂಸ್’ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ.