January 15, 2021
‘ಪಾಕ್ ಪರ ಘೋಷಣೆ’ ವಿವಾದ | SDPI ‘ಎಸ್.ಪಿ. ಕಚೇರಿ ಚಲೋ’ ಪ್ರತಿಭಟನೆಗೆ ಚಾಲನೆ; ಕ್ಲಾಕ್ ಟವರ್ ಬಳಿ ಸಾವಿರಾರು ಜನ ಜಮಾವಣೆ

ಮಂಗಳೂರು : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ದಿನ ಡಿ.30ರಂದು ಬೆಳ್ತಂಗಡಿಯ ಉಜಿರೆಯ ಮತ ಎಣಿಕೆ ಕೇಂದ್ರದ ಹೊರಗೆ ಪಾಕ್ ಪರ ಘೋಷಣೆ ಕೂಗಲಾಗಿದೆ ಎನ್ನಲಾದ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ SDPI ವತಿಯಿಂದ ಆಯೋಜಿಸಲಾಗಿರುವ ಬೃಹತ್ ಪ್ರತಿಭಟನೆಗೆ ಚಾಲನೆ ನೀಡಲಾಗಿದೆ. ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಘೋಷಣೆ ಕೂಗುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು.
ಪಾಕ್ ಪರ ಘೋಷಣೆ ಕೂಗಿದ ನೈಜ ಆರೋಪಿಗಳನ್ನು ಬಂಧಿಸಬೇಕು. ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿರುವ ಅಮಾಯಕರನ್ನು ಬಿಡುಗಡೆಗೊಳಿಸಬೇಕು, ಅಮಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ ಬೆಳ್ತಂಗಡಿ ಪೊಲೀಸರ ವಿರದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ‘ಎಸ್.ಪಿ. ಕಚೇರಿ ಚಲೋ’ ಪ್ರತಿಭಟನೆಗೆ ಸಾವಿರಾರು ಜನರು ಸೇರಿದ್ದಾರೆ.
ನಗರದ ಕ್ಲಾಕ್ ಟವರ್ ಬಳಿಯಲ್ಲಿ ಸಾವಿರಾರು ಮಂದಿ ಜಮಾವಣೆಗೊಂಡಿದ್ದು, ಪ್ರತಿಭಟನೆಗೆ ಘೋಷಣೆಗಳ ಮೂಲಕ ಚಾಲನೆ ನೀಡಲಾಗಿದೆ.
ಎಸ್ ಡಿಪಿಐ ಪ್ರಮುಖರು ಪ್ರತಿಭಟನೆಯ ನಾಯಕತ್ವ ವಹಿಸಿದ್ದಾರೆ.


