ರೈತ ಹೋರಾಟದಲ್ಲಿ ಮಡಿದ ರೈತನ ಮೃತದೇಹಕ್ಕೆ ರಾಷ್ಟ್ರಧ್ವಜ ಹೊದಿಸಿದುದಕ್ಕೆ ಕುಟುಂಬದ ವಿರುದ್ಧ ಕೇಸ್ ದಾಖಲು

Prasthutha|

ಪಿಲಿಭಿತ್ : ರೈತರ ಹೋರಾಟದಲ್ಲಿ ಭಾಗಿಯಾಗಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮಡಿದ ರೈತರೊಬ್ಬರ ಅಂತ್ಯ ಸಂಸ್ಕಾರದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದಲ್ಲಿ ಮೃತನ ತಾಯಿ ಮತ್ತು ಸಹೋದರನ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಘಾಝಿಪುರದ ಪ್ರತಿಭಟನಾ ಸ್ಥಳದ ಬಳಿ ರೈತ ಮೃತಪಟ್ಟಿದ್ದರು. ಮೃತಪಟ್ಟಿದ್ದ ರೈತನ ದೇಹವನ್ನು ತ್ರಿವರ್ಣ ಧ್ವಜದಿಂದ ಸುತ್ತಿ ಅಂತಿಮ ಸಂಸ್ಕಾರದ ವೇಳೆ ಧ್ವಜ ಎಳೆದಿರುವ ವೀಡಿಯೊ ಆಧಾರದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದ ಧ್ವಜ ಸಂಹಿತೆ ಆಧಾರವಾಗಿ ನಾಗರಿಕರ ಶವಗಳ ಅಂತ್ಯಕ್ರಿಯೆಯಲ್ಲಿ ತ್ರಿವರ್ಣ ಧ್ವಜ ಸುತ್ತುವುದು, ಎಳೆಯುವುದು ಅಪರಾಧವಾಗಿದೆ.

- Advertisement -

ಜ.23ರಂದು ಬುಝಿಯ ಗ್ರಾಮದ ಬಲ್ಜೀಂದ್ರ ಎಂಬ ವ್ಯಕ್ತಿ ತನ್ನ ಗೆಳೆಯರೊಡನೆ ರೈತ ಆಂದೋಲನದಲ್ಲಿ ಭಾಗವಹಿಸಿದ್ದಾರೆ. ಜ.25ರಂದು ಅವರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅಪಘಾಥದಲ್ಲಿ ನಿಧನ ಹೊಂದಿದ ಅವರ ಮೃತದೇಹವನ್ನು ಅಪರಿಚಿತ ವ್ಯಕ್ತಿಯ ಶವ ಎಂದು ಪರಿಗಣಿಸಿ ಶವಾಗಾರದಲ್ಲಿ ಇರಿಸಲಾಗಿತ್ತು.

ಘಟನೆಯ ಬಗ್ಗೆ ಅರಿತ ಅವರ ಕುಟುಂಬ ಫೆ.2ರಂದು ಆಗಮಿಸಿ, ಶವ ತೆಗೆದುಕೊಂಡು ಹೋಗಿದ್ದರು. ಹುತಾತ್ಮರ ರೀತಿ ಮೃತ ದೇಹದ ಮೇಲೆ ರಾಷ್ಟ್ರಧ್ವಜ ಹೊದಿಸಿದ್ದುದು ವೀಡಿಯೊವೊಂದರಲ್ಲಿ ಕಂಡುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಆದ ಬಳಿಕ, ಪೊಲೀಸರು ಬಲ್ಜೀಂದ್ರ ಅವರ ತಾಯಿ ಜಸ್ವೀರ್ ಕೌರ್, ಸಹೋದರ ಗುರ್ವೀಂದರ್ ಹಾಗೂ ಮತ್ತೊಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.  

Join Whatsapp