‘ಚೌರಿ ಚೌರಾ’ ಚಳವಳಿಯ ಶತಮಾನೋತ್ಸವ ಭಾಷಣದಲ್ಲಿ ಗಾಂಧೀಜಿಯನ್ನೇ ಮರೆತುಬಿಟ್ಟ ಮೋದಿ!

Prasthutha|

- Advertisement -

ಗೋರಖ್‌ಪುರ: ಚೌರಿ ಚೌರಾ ಘಟನೆಯ ಶತಮಾನೋತ್ಸವದ ಸಂದರ್ಭದಲ್ಲಿ ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರ ಬಗ್ಗೆ ಪ್ರಸ್ತಾಪ ಮಾಡದೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. 100 ನೇ ವಾರ್ಷಿಕೋತ್ಸವದ ಆಚರಣೆಯನ್ನು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಉದ್ಘಾಟಿಸಿದ್ದಾರೆ. ಉದ್ಘಾಟನಾ ಸಮಾರಂಭವನ್ನು ಗೋರಖ್‌ಪುರದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ನಡೆಸಲಾಗಿತ್ತು.

ಚೌರಿ ಚೌರಾ ಘಟನೆಯು ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಒಂದು ಭಾಗವಾಗಿತ್ತು. ಚೌರಿ ಚೌರಾದಲ್ಲಿ 22 ಪೊಲೀಸರು ಸಜೀವ ದಹನವಾದ ನಂತರ ಅಸಹಕಾರ ಚಳವಳಿಯನ್ನು ನಿಲ್ಲಿಸುವುದಾಗಿ ಗಾಂಧಿ ಘೋಷಿಸಿದ್ದರು. ಅಸಹಕಾರ ಚಳವಳಿಯ ರ್ಯಾಲಿಗೆ ಪೊಲೀಸರು ಗುಂಡು ಹಾರಿಸಿದಾಗ ಜನರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸರನ್ನು ಕೊಂದು ಹಾಕಿದ್ದರು. ಈ ಘಟನೆಯು ಗಾಂಧೀಜಿಯನ್ನು ಅಹಿಂಸಾ ಸಿದ್ಧಾಂತಕ್ಕೆ ಕರೆದೊಯ್ಯಲು ಗಂಭೀರ ಪ್ರಭಾವ ಬೀರಿತ್ತು.

- Advertisement -

ಇದೇ ವೇಳೆ “ ‘ಚೌರಿ ಚೌರ ಹುತಾತ್ಮರನ್ನು’ ಇತಿಹಾಸದಲ್ಲಿ ಕಡೆಗಣಿಸಲಾಗಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಚೌರಿ ಚೌರಾ ಘಟನೆ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಪ್ರೇರಣೆಯಾಗಿತ್ತು. ಇತಿಹಾಸದ ಪುಟಗಳಲ್ಲಿ ಅವರಿಗೆ ಪ್ರಾಮುಖ್ಯತೆ ನೀಡದಿದ್ದರೂ ಅವರ ರಕ್ತವು ದೇಶದ ಮಣ್ಣಿನಲ್ಲಿದೆ. ಅದು ನಮಗೆ ಸ್ಫೂರ್ತಿ ನೀಡುತ್ತದೆ ”ಎಂದು ಮೋದಿ ಹೇಳಿದ್ದಾರೆ. ಮೋದಿ ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಬಾ ರಾಘವ್ ದಾಸ್ ಮತ್ತು ಹಿಂದೂ ಮಹಾಸಭಾ ಸಂಸ್ಥಾಪಕ ಮದನ್ ಮೋಹನ್ ಮಾಳವಿಯಾ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇವರಿಬ್ಬರು ಅನೇಕ ಜೀವಗಳನ್ನು ಉಳಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

Join Whatsapp