ಶಿರಾಡಿ ಘಾಟ್ 2ನೇ ತಿರುವಿನಲ್ಲಿ ಮಗುಚಿಬಿದ್ದ ಗ್ಯಾಸ್ ಟ್ಯಾಂಕರ್ | ಸಂಚಾರ ಸ್ಥಗಿತ

Prasthutha|

ಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಎರಡನೇ ತಿರುವಿನಲ್ಲಿ ಅನಿಲ ತುಂಬಿದ ಟ್ಯಾಂಕರ್ ಮಗುಚಿ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡ ಘಟನೆ ವರದಿಯಾಗಿದೆ.

- Advertisement -

ಸಕಲೇಶಪುರ ಠಾಣಾ ವ್ಯಾಪ್ತಿಯ ಶಿರಾಡಿ ಎರಡನೇ ತಿರುವಿನಲ್ಲಿ ಟ್ಯಾಂಕರ್ ಮಗುಚಿಬಿದ್ದಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಅನಿಲ ಹೇರಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಮಗುಚಿಬಿದ್ದಿದೆ. ಸಂಚಾರ ಸ್ಥಗಿತವಾಗಿದ್ದು, ರಾತ್ರಿ ವೇಳೆ ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

Join Whatsapp