ಪ್ರತಿಭಟನಾ ನಿರತ ರೈತರನ್ನು ಸೋಲಿಸಲು ಮೋದಿ ಸರಕಾರ ವಿಫಲವಾಗಲು ಕಾರಣವಾದ ಆ ಐದು ವಿಚಾರಗಳು ಯಾವುವು?

Prasthutha|

ಚಂಡೀಗಢ: ಪ್ರತಿಭಟನಾ ನಿರತ ರೈತರು ಮತ್ತು ಮೋದಿ ಸರಕಾರದ ಮಧ್ಯೆ ಐದು ಸುತ್ತಿನ ಮಾತುಕತೆಗಳು ನಡೆದರೂ ಮುಂದುವರಿಯುತ್ತಿರುವ ದಿಲ್ಲಿ ದಿಗ್ಬಂಧನಕ್ಕೆ ಯಾವುದೇ ಪರಿಹಾರಗಳು ಉದಯಿಸಿಲ್ಲ. ತಮ್ಮ ನಡತೆ ಮತ್ತು ನಾಯಕತ್ವದಲ್ಲಿ ಉದಾತ್ತ ಗುಣವನ್ನು ಹೊಂದಿರುವುದರೊಂದಿಗೆ ರೈತ ನಾಯಕರ ದೃಢ ನಿಶ್ಚಯ, ರಾಜಿ ನಿರಾಕರಣೆಯ ಗುಣ ಸರಕಾರಕ್ಕೆ ಅವರ ಜೊತೆ ವ್ಯವಹರಿಸುವುದನ್ನು ಕಷ್ಟಗೊಳಿಸಿದೆ.

- Advertisement -

ದೀರ್ಘವಾಧಿಗೆ ತಂಗಲು ನೆರವಾಗುವಂತೆ ಮಾರ್ಪಾಡುಗೊಳಿಸಿದ ಉಳುಬಂಡಿಗಳು (ಟ್ರ್ಯಾಕ್ಟರ್)
ರೈತರು ಹಲವು ತಿಂಗಳುಗಳ ಕಾಲ ದಿಲ್ಲಿ ಗಡಿಯಲ್ಲಿ ತಂಗುವುದಕ್ಕೆ ಸಿದ್ಧರಾಗಿದ್ದಾರೆ. ಉಳುಬಂಡಿಗಳಲ್ಲಿ ಪ್ರಯಾಣಿಸುತ್ತಾ ಅದನ್ನೇ ರಾತ್ರಿ ತಂಗಲು ಬಳಸುವುದು ಪಂಜಾಬ್ ನಲ್ಲಿ ಹೊಸತೇನಲ್ಲ.
ವಾರ್ಷಿಕವಾಗಿ ನಡೆಯುವ, ಕಳೆದ ವಾರ ಡಿಸೆಂಬರ್ ನಲ್ಲಿ ಫತೇಗಢ್ ಸಾಹಿಬ್ ನಲ್ಲಿ ನಡೆದ ಮೂರು ದಿನಗಳ ಶಹೀದಿ ಜೋರ್ ಮೇಳದಲ್ಲಿ ಈ ವಿಶೇಷವಾಗಿ ಮಾರ್ಪಾಡುಗೊಳಿಸಲಾದ ಉಳುಬಂಡಿಗಳು ಸಾಮಾನ್ಯವಾಗಿತ್ತು. ಈ ಮೇಳಕ್ಕೆ ಮುಂಚಿತವಾಗಿ ಪಂಜಾಬ್ ನಾದ್ಯಂತ ಗ್ರಾಮಸ್ಥರು ಧಾನ್ಯ, ಪಾತ್ರೆಗಳು, ಅಡುಗೆ ತೈಲ, ಮರ, ಗ್ಯಾಸ್ ಸಿಲಿಂಡರ್ ಮತ್ತು ಸ್ಥಳಿಯವಾಗಿ ಸುತ್ತಾಡಲು ಬೈಕ್ ಗಳನ್ನೂ ಉಳುಬಂಡಿಗಳಲ್ಲಿ ತುಂಬಿಸಿಕೊಂಡು ಲಂಗರುಗಳನ್ನು ಆಯೋಜಿಸುವುದಕ್ಕಾಗಿ ಬಂದಿದ್ದರು. ಅವರು ಈ ಉಳುಬಂಡಿಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಅದನ್ನು ವಾರದವರೆಗೆ ತಮ್ಮ ಮನೆಯನ್ನಾಗಿಸಿದ್ದರು.
ಒಳಗೆ ಮರದ ಹಲಗೆಗಳನ್ನು ಬಳಸಿ ಉಳುಬಂಡಿಗಳನ್ನು ವಿಭಾಗಿಸಲಾಗುತ್ತದೆ. ಮೇಲಿನ ಭಾಗವನ್ನು ತಮ್ಮ ಸಾಮಾಗ್ರಿಗಳನ್ನು ಕೂಡಿಡಲು ಬಳಸಿದರೆ ಕೆಳಭಾಗವನ್ನು ಕೂರಲು ಮತ್ತು ಮಲಗಲು ಬೇಕಾಗುವಂತೆ ಕುಶನ್ ನಿಂದ ಮೆತ್ತನೆಗೊಳಿಸಲಾಗಿರುತ್ತದೆ. ಮೇಳವು ತೀವ್ರ ಚಳಿಗಾಲದಲ್ಲಿ ನಡೆಯುವುದರಿಂದ ಈ ಉಳುಬಂಡಿಗಳನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಶೀಟ್ ಗಳಿಂದ ಮುಚ್ಚಲಾಗಿರುತ್ತದೆ.
“ರೈತರು ದಿಲ್ಲಿಗೆ ಹೋಗಿ ಆಹಾರ ತಯಾರಿಸಲು ಆರಂಭಿಸಿರುವುದು ಮತ್ತು ಉಳುಬಂಡಿಯಲ್ಲಿ ನೆಲೆಸುತ್ತಿರುವುದು ಅಚ್ಚರಿಯೇನಲ್ಲ. ಯಾಕೆಂದರೆ ತಮ್ಮ ಜೀವನದುದ್ದಕ್ಕೂ ಅವರು ಅದನ್ನು ಮಾಡಿದ್ದಾರೆ. ಆದರೆ ಇದು ನಾವು ನೋಡುವಷ್ಟು ಸರಳವಲ್ಲ” ಎಂದು ಚುನ್ನಿ ಕಲನ್ ನಿಂದ ಬಂದ ರೈತ ಗುರುದರ್ಶನ್ ಸಿಂಗ್ ಹೇಳುತ್ತಾರೆ.

ರಾಜಕೀಯ ರಹಿತ ಗೊಳಿಸಿ ವೇದಿಕೆಯ ಮೇಲೆ ನಿಯಂತ್ರಣ
ಸಿಂಘು ಗಡಿಗೆ ಹೋಗುವ ರಸ್ತೆಯ ಮೇಲೆ ಹಲವು ಕಿಲೋ ಮೀಟರ್ ಗಳವರೆಗೆ ಉಳುಬಂಡಿಗಳ ಸಾಲು ನಿಂತಿದ್ದರೆ, ತಾತ್ಕಾಲಿಕ ವೇದಿಕೆ ನಿರ್ಮಿಸಲಾದ ಸ್ಥಳವು ಪ್ರತಿಭಟನೆಯ ಕೇಂದ್ರ ಬಿಂದುವಾಗಿದೆ. ದಿನದುದ್ದಕ್ಕೂ ರೈತರನ್ನುದ್ದೇಶಿಸಿ ಮಾತನಾಡಲು ಧ್ವನಿವರ್ಧಕ ವ್ಯವಸ್ಥೆಗಳನ್ನು ಅದು ಹೊಂದಿದೆ.
ಸರಕಾರದೊಂದಿಗೆ ನಡೆಸಲಾದ ಸಭೆಗಳ ಫಲಿತಾಂಶ ಮತ್ತು ಭವಿಷ್ಯದ ಕ್ರಮಗಳ ಕುರಿತ ಮುಖ್ಯ ಪ್ರಕಟನೆಗಳನ್ನು ವೇದಿಕೆಯ ಮೂಲಕ ನೀಡಲಾಗುತ್ತದೆ. ಕಳೆದ ಕೆಲವು ದಿನಗಳಲ್ಲಿ ರೈತ ನಾಯಕರೇ ಅಲ್ಲದೆ ಹೋರಾಟಗಾರರು, ಗಾಯಕರು, ನಟರು, ಕ್ರೀಡಾಪಟುಗಳು ವೇದಿಕೆಯ ಮೇಲೆ ಮಾತನಾಡಿದ್ದಾರೆ. ಪ್ರತಿಭಟನೆಯ ಮೇಲೆ ಗಮನ ಕೇಂದ್ರೀಕರಿಸಲು, ಮಾತಾನಾಡುವುದಕ್ಕಾಗಿ ವೇದಿಕೆ ಹತ್ತುವವರ ಮೇಲೆ ಕಠಿಣ ನಿಯಂತ್ರಣವಿಡುವುದಕ್ಕಾಗಿ ಒಕ್ಕೂಟಗಳು 30 ಸ್ವಯಂಸೇವಕರನ್ನು ನೇಮಿಸಿದೆ.
“ರಾಜಕಾರಣಿಗಳನ್ನು ಮಾತನಾಡಲು ಅನುಮತಿಸಲಾಗುವುದಿಲ್ಲ. ಖಾಲಿಸ್ತಾನ್ ಸಿದ್ಧಾಂತವಾದಿಗಳು ವೇದಿಕೆಯಿಂದ ಮಾತನಾಡಲಾಗದು. ಅಪಾಯವುಂಟುಮಾಡಬಲ್ಲ ಅಥವಾ ಆಂದೋಲನದ ದಿಕ್ಕು ಬದಲಾಯಿಸಬಲ್ಲ ಯಾರಿಗೂ ಸ್ವಾಗತವಿಲ್ಲ” ಎಂದು ಬಿಕೆಯು ಉಪಾಧ್ಯಕ್ಷ ಗುರುಮೀತ್ ಸಿಂಗ್ ತಿಳಿಸಿದರು.
ಅನುಮಾನಾಸ್ಪದ ವ್ಯಕ್ತಿಗಳು ಮತ್ತು ತೊಂದರೆ ಸೃಷ್ಟಿಸುವವರಿಂದ ಪ್ರತಿಭಟನ ಸರಹದ್ದನ್ನು ರಕ್ಷಿಸುವುದಕ್ಕಾಗಿ ಕನಿಷ್ಠ 400 ಸ್ವಯಂಸೇವಕರನ್ನು ನೇಮಿಸಲಾಗಿದೆ.

- Advertisement -

ನಾಯಕರ ಬದಲಾವಣೆ – ಅಧಿಕಾರದ ಕೇಂದ್ರೀಕರಣವಿಲ್ಲ
ಪಂಜಾಬ್ ನಲ್ಲಿ ರೈತ ಮಂಡಳಿಗಳ ಮಧ್ಯೆ ತೀವ್ರ ಬಿರುಕಿದ್ದರೂ ಈ ಪ್ರತಿಭಟನೆಯಲ್ಲಿ ಅವರು ಗಮನಾರ್ಹ ಏಕತೆಯನ್ನು ಪ್ರದರ್ಶಿಸಿದ್ದಾರೆ. ಜೂನ್ ನಲ್ಲಿ 10 ರೈತ ಒಕ್ಕೂಟಗಳಿಂದ ಪ್ರತಿಭಟನೆ ಆರಂಭವಾಯಿತು. ಸೆಪ್ಟಂಬರ್ 31ರ ವೇಳೆಗೆ 31 ಸಂಘಟನೆಗಳು ಕೈಜೋಡಿಸಿದವು. ಅಂದಿನಿಂದಲೂ ಸಂಘಟಕರು ಸಭೆಗಳನ್ನು ನಡೆಸಲು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳಲು ಪ್ರಜಾಸತ್ತಾತ್ಮಕ ಹಾದಿಯನ್ನು ಅನುಸರಿಸಿದ್ದಾರೆ. ಪ್ರತಿಯೊಂದು ಸಭೆಯೂ 31 ಒಕ್ಕೂಟಗಳ ಓರ್ವ ಮುಖ್ಯಸ್ಥನ ಅಧ್ಯಕ್ಷತೆಯಲ್ಲಿ ನಡೆಯುತ್ತದೆ.
“ಆ ದಿನದ ಪ್ರಧಾನ್ ಸಭೆಯ ಅಧ್ಯಕ್ಷತೆ ವಹಿಸುತ್ತಾರೆ ಮತ್ತು ನಿರ್ಣಯಗಳ ಕುರಿತು ನಂತರ ಪತ್ರಿಕಾಗೋಷ್ಠಿ ನಡೆಸುತ್ತಾರೆ. ತಾನು ಸಣ್ಣ ಒಕ್ಕೂಟದ ಮುಖ್ಯಸ್ಥನಾದ ಕಾರಣ ದೊಡ್ಡ ಒಕ್ಕೂಟದ ಮುಖ್ಯಸ್ಥನಿಗೆ ಸಮಾನನಲ್ಲ ಎಂದು ಯಾವುದೇ ಒಕ್ಕೂಟ ನಾಯಕನಿಗೆ ಅನಿಸಬಾರದು” ಎಂದು ಗುರ್ಮಿತ್ ಸಿಂಗ್ ಹೇಳುತ್ತಾರೆ.
ಇತರ ಒಕ್ಕೂಟಗಳಿಗಾಗಿ ನಿರ್ಣಯ ತೆಗೆಯುವ ಅಧಿಕಾರವು ಓರ್ವನೇ ನಾಯಕನ ಬಳಿ ಕೇಂದ್ರೀಕೃತಗೊಂಡಿರುವುದಿಲ್ಲ ಎಂಬುದನ್ನು ಇದು ಖಾತರಿಪಡಿಸುತ್ತದೆ. “ಇದರಿಂದಾಗಿ ಯಾವುದೇ ವ್ಯಕ್ತಿಗೆ ಏಕತೆಯನ್ನು ಒಡೆಯಲು ಸಾಧ್ಯವಿಲ್ಲ. ಯಾಕೆಂದರೆ ಈ ರೀತಿಯ ನಾಯಕತ್ವದಲ್ಲಿ ಎಲ್ಲರೂ ಪ್ರಮುಖರಾಗಿರುತ್ತಾರೆ” ಎಂದು ಗುರುಮೀತ್ ಸಿಂಗ್ ತಿಳಿಸುತ್ತಾರೆ.
ಊಟ, ನೀರು ಸ್ವೀಕರಿಸಲಾರೆವು– ನೈತಿಕ ದೃಢತೆಯ ಪ್ರದರ್ಶನ
ಇದನ್ನು “ಸತ್ಯಾಗ್ರಹ”ವೆಂದು ಬಣ್ಣಿಸಿರುವ ರೈತ ನಾಯಕರು ಯಾವುದೇ ಮಂತ್ರಿಗಳೊಂದಿಗೆ ಸಭೆ ನಡೆಸುವಾಗ ಸರಕಾರದ ಆತಿಥ್ಯ ಸ್ವೀಕರಿಸಲು ನಿರಾಕರಿಸಿದ್ದಾರೆ. ಬದಲಾಗಿ ಅವರು ಪ್ರತಿಭಟನಾ ಸ್ಥಳದ ಲಂಗರಿನಲ್ಲಿ ತಯಾರಿಸಲಾದ ತಮ್ಮದೇ ಅಡುಗೆಯನ್ನು ತರಿಸಿ ವಿಜ್ಞಾನ ಭವನದ ನೆಲದಲ್ಲಿ ಕೂತು ತಿಂದಿದ್ದಾರೆ.
“ನಮ್ಮ ನಿರ್ಧಾರವು ಅಲ್ಲಾಡಲಾರದು ಎಂಬುದನ್ನು ಸರಕಾರಕ್ಕೆ ಮತ್ತು ಇಲ್ಲಿ ಸೇರಿದ ಸಾವಿರಾರು ಬೆಂಬಲಿಗರಿಗೆ ಇದು ತೋರಿಸಿಕೊಟ್ಟಿದೆ. ಮೊದಲ ದಿನ ನಾವು ಆತಿಥ್ಯವನ್ನು ಸ್ವೀಕರಿಸಿದಾಗ ನಾವು ಚಹಾ ಕುಡಿದೆವು ಮತ್ತು ಮಾತುಕತೆಗಳು ಸೌಹಾರ್ದಯುತವಾಗಿತ್ತು ಎಂದು ಮಂತ್ರಿಗಳು ಪಟ್ಟಣದಲ್ಲಿ ಹೇಳುತ್ತಾ ಹೋಗಿದ್ದರು” ಎಂದು ಗುರ್ಮಿತ್ ಸಿಂಗ್ ತಿಳಿಸಿದರು.
“ನಾವು ಗಂಭೀರವಾಗಿಲ್ಲ ಅಥವಾ ಅವರ ಚಹಾ-ಕಾಫಿ ಕುಡಿಯುವುದಕ್ಕಾಗಿ ಇಲ್ಲಿದ್ದೇವೆ ಎಂಬ ಸಂದೇಶವನ್ನು ಸರಕಾರ ನೀಡಲು ಅನುಮತಿಸುವುದಿಲ್ಲವೆಂದು ನಾವು ಆಗ ನಿರ್ಧರಿಸಿದ್ದೆವು. ಇದು ನಮ್ಮ ಜೀವನದ, ನಮ್ಮ ಅಸ್ತಿತ್ವದ ವಿಷಯವಾಗಿದೆ ಮತ್ತು ನಮ್ಮ ನಡವಳಿಕೆಯಲ್ಲಿ ಅದು ಪ್ರತಿಫಲಿಸಬೇಕಾಗಿದೆ” ಎಂದು ಅವರು ಹೇಳಿದರು.

ಯೆಸ್ ಆರ್ ನೋ – ನಿರ್ಣಯಕ ಒತ್ತಡ ಸೃಷ್ಟಿ
ಶನಿವಾರದ ಐದನೆ ಸುತ್ತಿನ ಸಭೆಯ ವೇಳೆ ರೈತ ನಾಯಕರು ಮಾತುಕತೆಯನ್ನು ಸ್ಥಗಿತಗೊಳಿಸಿದ್ದಾರೆ. ಅದರ ನಂತರ ಅವರು ಮೌನವಾಗಿರಲು ಮತ್ತು ಮೌನ ವೃತವನ್ನು ಪಾಲಿಸಲು ಹಾಗೂ ಮೂರು ಕೃಷಿ ಮಸೂದೆಗಳನ್ನು ಹಿಂದೆಗೆಯುವ ಕುರಿತು ಯೆಸ್ ಆರ್ ನೋ ಉತ್ತರವನ್ನು ಆಗ್ರಹಿಸಿ ಮಂತ್ರಿಗಳ ಮುಂದೆ ಪ್ಲೇಕಾರ್ಡನ್ನು ಪ್ರದರ್ಶಿಸಲು ಅವರು ನಿರ್ಧರಿಸಿದ್ದಾರೆ.
“ ಈ ನಿರ್ಣಯವು ಸಂಪೂರ್ಣ ರಾಜಿ ರಹಿತವಾದದ್ದು. ಸರಕಾರ ಅವುಗಳನ್ನು ತಿದ್ದಲು ಸಿದ್ಧವಾಗಿದೆ. ಆದರೆ ಅದು ನಮಗೆ ಸ್ವೀಕಾರಾರ್ಹವಲ್ಲ” ಎಂದು ಬಿಕೆಯು (ಉಗ್ರಹಾಣ್) ಮುಖ್ಯಸ್ಥ ರೈತ ನಾಯಕ ಜೋಗೀಂದರ್ ಸಿಂಗ ಉಗ್ರಹಾನ್ ವಿಜ್ಞಾನ ಭವನದ ಹೊರಗೆ ಶನಿವಾರದಂದು ಹೇಳಿದ್ದಾರೆ.
“ಮಾತುಕತೆಗಳು ಪುನರಾವರ್ತನೆಯಾಗುತ್ತಿರುವುದರಿಂದ ಮತ್ತು ಹೊಸತೇನೂ ಫಲಿತಾಂಶವು ಹೊರಡದ ಕಾರಣ ನಾವು – ಯೆಸ್ ಆರ್ ನೋ ಎಂಬ ಒಂದು ಮಾತಿನ ಉತ್ತರವನ್ನು ಸರಕಾರದಿಂದ ಕೇಳಲು ನಿರ್ಣಯಿಸಿದ್ದೇವೆ” ಎಂದು ಅವರು ಹೇಳಿದರು.


(ಕೃಪೆ: ದಿ ಪ್ರಿಂಟ್)

Join Whatsapp