ಕೃಷಿ ಕಾನೂನು ಕೈಬಿಡಿ, ಇಲ್ಲವೇ ಅಧಿಕಾರದಿಂದ ಕೆಳಗಿಳಿಯಿರಿ : ಮೋದಿ ಸರಕಾರಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

Prasthutha|

ಕೊಲ್ಕತಾ : ದೇಶಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೂತನ ಕೃಷಿ ನೀತಿಯನ್ನು ಕೈಬಿಡಿ, ಇಲ್ಲವೇ ಅಧಿಕಾರದಿಂದ ಕೆಳಗಿಳಿಯಿರಿ ಎಂದು ಮಮತಾ ಹೇಳಿದ್ದಾರೆ.

- Advertisement -

“ನಾವು ಅಧಿಕಾರಕ್ಕೆ ಬಂದಂದಿನಿಂದ ಬಂದ್ ಗೆ ಬೆಂಬಲಿಸಿಲ್ಲ, ಯಾಕೆಂದರೆ ಸರಕಾರ ಬಂದ್ ಗೆ ಬೆಂಬಲಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗಿ ನಾನು ಬಂದ್ ಗೆ ಬೆಂಬಲಿಸುವಂತಿಲ್ಲ. ಆದರೆ, ಟಿಎಂಸಿ ನಾಯಕಿಯಾಗಿ, ನಾನು ರೈತರ ಬೇಡಿಕೆಗಳನ್ನು ಬೆಂಬಲಿಸಬಹುದು. ರೈತರು ಇಟ್ಟಿರುವ ಬೇಡಿಕೆಯನ್ನು ನಾನು ಬೆಂಬಲಿಸುತ್ತೇನೆ. ನಾನು ಸಿಂಗೂರು, ನಂದಿಗ್ರಾಮ್, ನೇತಾಯ್ ಅನ್ನು ಮರೆತಿಲ್ಲ. ಕೃಷಿಕರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂಬ ಭರವಸೆ ನೀಡುತ್ತೇನೆ’’ ಎಂದು ಮಮತಾ ಹೇಳಿದ್ದಾರೆ.

ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಬ್ಯಾನರ್ಜಿ, ಬಿಜೆಪಿ ಸರಕಾರ ತಕ್ಷಣವೇ ಕೃಷಿ ಕಾನೂನು ಹಿಂಪಡೆಯಬೇಕು, ಇಲ್ಲವೇ ಅಧಿಕಾರದಿಂದ ಕೆಳಗಿಳಿಯಬೇಕು. ರೈತರ ಹಕ್ಕುಗಳನ್ನು ಬಲಿ ನೀಡಿದ ಬಳಿಕ, ಅದು ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಅವರು ಹೇಳಿದ್ದಾರೆ.     

Join Whatsapp