ಇಂಡಿಯನ್ ಸೋಷಿಯಲ್ ಫಾರಂ (ISF) ಅಸೀರ್, ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹನೀಫ್ ಮಂಜೇಶ್ವರಗೆ ಗಲ್ಫ್ ಮಲಯಾಳಿ ಫೆಡರೇಶನ್ ವತಿಯಿಂದ ಸನ್ಮಾನ

Prasthutha|

ಇಂಡಿಯನ್ ಸೋಷಿಯಲ್ ಫಾರಂ (ISF) ಅಸೀರ್, ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹನೀಫ್ ಮಂಜೇಶ್ವರಗೆ ಗಲ್ಫ್ ಮಲಯಾಳಿ ಫೆಡರೇಶನ್ ವತಿಯಿಂದ ಸನ್ಮಾನ.

ರಿಯಾಧ್ : ಸೌದಿ ಅರೇಬಿಯಾದಾದ್ಯಂತ ಸಂಘಟಿತಗೊಂಡಿರುವ ಅನಿವಾಸಿ ಭಾರತೀಯರ ಸಾಮಾಜಿಕ ಸೇವಾ ಸಂಘಟನೆ ಗಲ್ಫ್ ಮಲಯಾಳಿ ಫೆಡರೇಶನ್ ವತಿಯಿಂದ ಇಂಡಿಯನ್ ಸೋಷಿಯಲ್ ಫಾರಂ(ISF) ಅಸೀರ್, ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಜನಾಬ್ ಹನೀಫ್ ಮಂಜೇಶ್ವರ ಇವರನ್ನು ಸನ್ಮಾನಿಸಲಾಯಿತು.

- Advertisement -

ಸನ್ಮಾನಿತರು ಅಸೀರ್ ಪ್ರಾಂತ್ಯದಲ್ಲಿ ಕಳೆದ ಎರಡು ದಶಕಗಳಿಂದ ಅನಿವಾಸಿ ಭಾರತೀಯರ ನೋವುಗಳಿಗೆ ತಕ್ಷಣ ಸ್ಪಂದಿಸುವ ಹಾಗೂ ಮರಣ ಹೊಂದಿದ ಎಲ್ಲಾ ರಾಜ್ಯಗಳ ಹಲವು ಮೃತದೇಹಗಳ ಕಾನೂನುಬಧ್ದ ವಿಲೇವಾರಿಗಳ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಇಂಡಿಯನ್ ಕಾನ್ಸುಲೇಟ್ ಅಸೀರ್ ವಲಯದ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -