ಫರಂಗಿಪೇಟೆ: ಎಸ್.ಡಿಪಿಐ ಕುಂಜತ್ಕಳ ಬೂತ್ ಸಮಿತಿ ಮತ್ತು ಇಮ್ದಾದ್ ಮಾಹಿತಿ ಮತ್ತು ಸೇವಾ ಕೇಂದ್ರದ ಸಹಯೋಗದಲ್ಲಿ ಉಚಿತ ಮಾಹಿತಿ ಮತ್ತು ಸೇವಾ ಶಿಬಿರ ರವಿವಾರ ಕುಂಜತ್ಕಳದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪುದು ಗ್ರಾಮ ಪಂಚಾಯತ್ ಸದಸ್ಯ ನಝೀರ್ ಕುಂಜತ್ಕಳ, ಕಳೆದ ಹಲವು ವರ್ಷಗಳಿಂದ ಫರಂಗಿಪೇಟೆ ಇಮ್ದಾದ್ ಮಾಹಿತಿ ಮತ್ತು ಸೇವಾ ಕೇಂದ್ರದ ಮೂಲಕ ಪುದು ಗ್ರಾಮದ ನಾಗರಿಕರಿಗೆ ಸರ್ಕಾರಿ ಮತ್ತು ಸರ್ಕಾರೇತರ ವಿವಿಧ ಸೌಲಭ್ಯಗಳಿಗೆ ಮತ್ತು ವಿವಿಧ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನಾಗರಿಕರಿಗೆ ಉಚಿತ ಸೇವೆ ನೀಡುತ್ತಿದೆ. ಕುಂಜತ್ಕಳ ಬೂತ್ ನಾಗರಿಕರ ಬೇಡಿಕೆಯಂತೆ ಎಸ್.ಡಿ.ಪಿಐ ಕುಂಜತ್ಕಳ ಬೂತ್ ಸಮಿತಿಯ ಸಹಯೋಗದಲ್ಲಿ ಮಾಹಿತಿ ಮತ್ತು ಸೇವಾ ಶಿಬಿರವನ್ನು ಇದೀಗ ಆಯೋಜಿಸಲಾಗಿದೆ ಎಂದು ಹೇಳಿದರು.
ಎಸ್.ಡಿಪಿಐ ಕುಂಜತ್ಕಳ ಬೂತ್ ಸಮಿತಿ ಅಧ್ಯಕ್ಷ ಮುಹಮ್ಮದ್ ಸಿರಾಜ್, ಕಾರ್ಯದರ್ಶಿ ಇರ್ಫಾನ್ ಮತ್ತು ಇಮ್ದಾದ್ ಮಾಹಿತಿ ಮತ್ತು ಸೇವಾ ಕೇಂದ್ರದ ಸಿಬ್ಬಂದಿಗಳಾದ ನಿಜಾಮ್ ಅಶ್ರಫ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುಮಾರು 60 ಜನರು ಶಿಬಿರದ ಸದುಪಯೋಗ ಪಡೆದುಕೊಂಡರು.