ಉತ್ತರ ಪ್ರದೇಶ: ಭಿಕ್ಷೆ ಬೇಡಿದ ಫಕೀರರನ್ನು ಭಯೋತ್ಪಾದಕರೆಂದು ಜರಿದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ

Prasthutha|

ಖರ್ಗುಪುರ್: ದೇಶದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ನಡೆಸುವ ಕೃತ್ಯಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ಇದೀಗ ಉತ್ತರ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಿದ್ದ ಮೂವರು ಫಕೀರರನ್ನು ತಡೆದು ನಿಲ್ಲಿಸಿದ ಬಲಪಂಥೀಯ ಗುಂಪೊಂದು, ಅವರಲ್ಲಿ ಜೈ ಶ್ರೀರಾಂ ಘೋಷಣೆ ಕೂಗುವಂತೆ ಬೆದರಿಕೆ ಒಡ್ಡಿರುವ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗಿದೆ.

- Advertisement -

ಯುಪಿಯ ಗೊಂಡಾದ ಖರ್ಗುಪುರ್ ಡಿಂಗ್ಗುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಲಪಂಥೀಯ ಗುಂಪು ಫಕೀರರ ವೇಷ ಭೂಷಣವನ್ನೂ ಅಣಕಿಸಿದೆ. ವೈರಲ್ ಆಗಿರುವ ವೀಡಿಯೋ ಒಂದರಲ್ಲಿ ದೊಣ್ಣೆ ಹಿಡಿದ ಸಂಘಪರಿವಾರದ ಕಾರ್ಯಕರ್ತನೋರ್ವ, ಮೂವರು ಫಕೀರರನ್ನು ಥಳಿಸಲು ಮುಂದಾಗಿದ್ದಾನೆ, ಅಲ್ಲದೇ ಅವರನ್ನು ಭಯೋತ್ಪಾದಕರೆಂದು ಕರೆದು, ನಿಮ್ಮ ಆಧಾರ್ ಕಾರ್ಡ್ ನೀಡಿ ಎಂದು ಪಟ್ಟು ಹಿಡಿದಿದ್ದಾನೆ.


ಮತ್ತೊಂದು ವೀಡಿಯೋದಲ್ಲಿ ಜೈ ಶ್ರೀರಾಂ ಘೋಷಣೆ ಕೂಗುವಂತೆ ಅದೇ ವ್ಯಕ್ತಿ ಒತ್ತಾಯಿಸಿದ್ದು, ಮೂವರೊಂದಿಗೂ ಬಸ್ಕಿ ತೆಗೆಯುವಂತೆ ಹೇಳಿದ್ದಾನೆ. ಈ ಕುರಿತು ಟ್ವೀಟ್ ಮಾಡಿರುವ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಹುಸೈನ್, ದಯವಿಟ್ಟು ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

Join Whatsapp