ಲಕ್ಷದ್ವೀಪದ ಶಾಲಾ ಮಕ್ಕಳ ಮಧ್ಯಾಹ್ನದ ಊಟದಲ್ಲಿ ಗೋಮಾಂಸ ನಿಷೇಧ ಆದೇಶಕ್ಕೆ ಹೈಕೋರ್ಟ್ ತಡೆ

Prasthutha|

ಪ್ರಫುಲ್ ಪಟೇಲ್ ನಿರ್ಧಾರಕ್ಕೆ ಕೇರಳ ಹೈಕೋರ್ಟ್ ನಲ್ಲಿ ಹಿನ್ನಡೆ

- Advertisement -

ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ಹೊಸ ಆಡಳಿತ ಸುಧಾರಣೆಗಳಿಗೆ ಕೇರಳ ಹೈಕೋರ್ಟಿನಲ್ಲಿ ಭಾರೀ ಹಿನ್ನಡೆಯಾಗಿದ್ದು, ಹೈನುಗಾರಿಕೆಯನ್ನು ಮುಚ್ಚುವ ಆದೇಶ ಮತ್ತು ಶಾಲಾ ಮಕ್ಕಳ ಮಧ್ಯಾಹ್ನದ ಊಟದಿಂದ ಕೋಳಿ ಮತ್ತು ಗೋಮಾಂಸವನ್ನು ಕೈಬಿಡಬೇಕೆಂಬ ಆದೇಶವನ್ನು ಕೇರಳ ಹೈಕೋರ್ಟ್ ತಡೆ ಹಿಡಿದಿದೆ.

ಲಕ್ಷದ್ವೀಪ ನಿವಾಸಿ ಅಜ್ಮಲ್ ಅಹ್ಮದ್ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೇರಳ ಹೈಕೋರ್ಟಿನ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಆದೇಶದಲ್ಲಿ ನ್ಯಾಯಾಲಯವು ಆಡಳಿತಾಧಿಕಾರಿ ಮತ್ತು ಲಕ್ಷದ್ವೀಪ ಆಡಳಿತದಿಂದ ವಿವರಣೆಯನ್ನು ಕೋರಿದ್ದು, ಲಕ್ಷದ್ವೀಪದಲ್ಲಿ ವರ್ಷಗಳಿಂದ ನಡೆದುಕೊಂಡು ಬರುವ ಆಹಾರ ಕ್ರಮವನ್ನು ಬದಲಾಯಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಈ ವೇಳೆ ಅಭಿಪ್ರಾಯಪಟ್ಟಿದೆ.

- Advertisement -

ಆಡಳಿತಾಧಿಕಾರಿಯ ಕ್ರಮವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕವರತ್ತಿ ನಿವಾಸಿ ವಕೀಲ ಅಜ್ಮಲ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಪರಿಗಣಿಸಿದೆ.

ದ್ವೀಪದ ಹೈನುಗಾರಿಕೆಗಳನ್ನು ಮುಚ್ಚಿ ಪ್ರಾಣಿಗಳನ್ನು ಹರಾಜು ಮಾಡಬೇಕು ಮತ್ತು ಶಾಲಾ ಮಕ್ಕಳ ಮಧ್ಯಾಹ್ನದ ಊಟದಿಂದ ಗೋಮಾಂಸ ಮತ್ತು ಕೋಳಿಯನ್ನು ಕೈಬಿಡಲು ಲಕ್ಷದ್ವೀಪದ ಆಡಳಿತಾಧಿಕಾರಿ ಮೇ ತಿಂಗಳಲ್ಲಿ ಆದೇಶ ಹೊರಡಿಸಿದ್ದರು.

Join Whatsapp