ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರಕಿಭಾವಿ ಗ್ರಾಮದ ಜೈನ ಮಂದಿರವೊಂದರಲ್ಲಿ ಶಿವಲಿಂಗ ಮೂರ್ತಿ ಪತ್ತೆಯಾಗಿದೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಲ್ಲಿ ಯಾವುದೇ ಲಿಂಗ ಪತ್ತೆಯಾಗಿಲ್ಲ, ನೂತನವಾಗಿ ಸ್ಥಾಪಿಸಲಾಗಿದೆ ಎಂದು ಗ್ರಾಮಸ್ಥರು ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಗ್ರಾಮಸ್ಥರು ಮಾಹಿತಿ ನೀಡಿದ ಮುರಕಿಭಾವಿ ಗ್ರಾಮದಲ್ಲಿ ಜೈನ ಸಮುದಾಯದ ಯಾವುದೇ ಕುಟುಂಬಗಳಿಲ್ಲ. ಹಲವು ವರ್ಷಗಳಿಂದ ಜೈನ ಮಂದಿರ ಪಾಳು ಬಿದ್ದಿದೆ. ಹೀಗಾಗಿ ಊರಿನ ಜನರೆಲ್ಲರೂ ಸೇರಿಕೊಂಡು ಶಿವಲಿಂಗ ಮತ್ತು ಬಸವಣ್ಣನವರ ಮೂರ್ತಿ ಸ್ಥಾಪನೆ ಮಾಡಿ ಪೂಜೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ