ತಮಿಳು ವಿರೋಧಿ ಬಿಜೆಪಿ: ಎಐಎಡಿಎಮ್ಕೆ

Prasthutha|

ಚೆನ್ನೈ: ಬಿಜೆಪಿಯು ತಮಿಳು ವಿರೋಧಿಯಾಗಿದೆಯೆಂದು, ತಮಿಳುನಾಡಿನ ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾದ ಎಐಎಡಿಎಮ್ಕೆ ಆರೋಪಿಸಿದೆ. ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವು ಎಂದಿಗೂ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದೆ.

- Advertisement -

ಸುದ್ದಿಗಾರರೊಂದಿಗೆ ಮಾತಾಡಿದ ಎಐಎಡಿಎಮ್ಕೆ ವಕ್ತಾರ ಸಿ.ಪೊನ್ನಯ್ಯನ್,ಬಿಜೆಪಿ ಜೊತೆಗಿನ ಮೈತ್ರಿಯು ಕೇವಲ ಚುನಾವಣೆ ಹೊಂದಾಣಿಕೆ ಮಾತ್ರ. ಕೇಸರಿ ಪಕ್ಷದ ಸಿದ್ಧಾಂತವನ್ನು ನಮ್ಮ ಪಕ್ಷ ಖಂಡಿತ ಒಪ್ಪುವುದಿಲ್ಲ ಎಂದು ಹೇಳಿದರು.

ಹಿಂದಿ ಏರಿಕೆ,ನೀಟ್ ಪರೀಕ್ಷೆ, ದ್ರಾವಿಡ ನೀತಿಗಳಿಗೆ ಅಪಮಾನ ಮುಂತಾದ ಬಿಜೆಪಿಯ ಬೆಳವಣಿಗೆಯನ್ನು ಖಂಡಿತವಾಗಿಯೂ ಎಐಎಡಿಎಮ್ಕೆ ಒಪ್ಪುವುದಿಲ್ಲವೆಂದು ಹೇಳಿದ್ದಾರೆ.

- Advertisement -

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಪ್ರಶ್ನಿಸಿದಾಗ “ಅದು ನನಗೆ ಗೊತ್ತಿಲ್ಲ”ಎಂದು ಹೇಳಿದರು.

Join Whatsapp