ಈಶ್ವರಪ್ಪ ವಿರುದ್ಧ ಮತ್ತೇ ಕೇಸ್ : ದೆಹಲಿಯಲ್ಲಿ ಮಾಜಿ ಸಚಿವರ ಕತ್ತಿಗೆ ಬಿತ್ತು ಧ್ವಜದ ಉರುಳು

Prasthutha|

ಶಿವಮೊಗ್ಗ: ಮುಂದೊಂದು ದಿನ ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂದಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಆಪ್ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ದೆಹಲಿಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

ಈಶ್ವರಪ್ಪ ಬಂಧಿಸಬೇಕು ಅಂತ ನಾರ್ಥ್ ಅವೆನ್ಯೂ ಠಾಣೆಯಲ್ಲಿ ಕೇಸ್ ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಈಶ್ವರಪ್ಪ, ಯಾರೋ ಪ್ರಚಾರಕ್ಕಾಗಿ ದೂರು ನೀಡಿದ್ದಾರೆ ಅಷ್ಟೇ. ಇದರಿಂದ ಏನು ಪ್ರಯೋಜನ ಇಲ್ಲ. ನನ್ನನ್ನು ಬಂಧಿಸೊಕೆ ಆಗಲ್ಲ. ಇಂಥಾ ನೂರು ಕೇಸ್ ದಾಖಲಾದ್ರೂ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ

ಗುತ್ತಿಗೆದಾರನಿಂದ 40% ಕಮಿಷನ್ ಪಡೆದಿದ್ದಾರೆ ಎಂಬ ಆರೋಪದಲ್ಲಿ ಸಚಿವಗಿರಿ ಕಳೆದುಕೊಂಡಿರುವ ಈಶ್ವರಪ್ಪ ಕತ್ತಿಗೆ ಇದೀಗ ಮತ್ತೊಂದು ಉರುಳು ಬಿದ್ದಿದೆ.



Join Whatsapp