ಕಾಸರಗೋಡು: ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸರ್ ಮಅದನಿ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಆಡಳಿತಾರೂಢ ಭಯೋತ್ಪಾದನೆಯ ವಿರುದ್ಧ ಜಾತ್ಯತೀತ ರಾಜಕೀಯ ನಾಯಕತ್ವ ಹಾಗೂ ಸಮುದಾಯ ಸಂಘಟನೆಗಳ ಮುಖಂಡರು ಮೌನ ಮುರಿಯಲು ಸಿದ್ಧರಾಗಬೇಕೆಂದು ಪಿಡಿಪಿ ಅಧ್ಯಕ್ಷ ಎಸ್.ಎಂ.ಬಶೀರ್ ಹೇಳಿದ್ದಾರೆ.
ಫ್ಯಾಶಿಸಂ ವಿರುದ್ಧ ತೀಕ್ಷ್ಣವಾಗಿ ಹೋರಾಡಿದ ಮಅದನಿಯವರನ್ನು ಇಲ್ಲವಾಗಿಸಲು ಫ್ಯಾಶಿಸ್ಟ್ ಭಯೋತ್ಪಾದನೆಯೊಂದಿಗೆ ಕೈಜೋಡಿಸಿ ಹಲವಾರು ವರ್ಷಗಳ ಹಿಂದೆಯೇ ಮಅದನಿಯವರ ನಾಶಕ್ಕೆ ನಾಂದಿ ಹಾಡಿದ ಕಪಟ ಜಾತ್ಯತೀತ ವಾದಿಗಳನ್ನು ಕಾಲ ಕ್ಷಮಿಸುವುದಿಲ್ಲ. ಮಅದನಿ ವಿಚಾರದಲ್ಲಿ ಕೇರಳದ ಜಾತ್ಯತೀತ ರಾಜಕೀಯ ಮತ್ತು ಧಾರ್ಮಿಕ ನಾಯಕತ್ವದ ನಿರಂತರ ಮೌನ ಅಪಾಯಕಾರಿಯಾಗಿದ್ದು, ಈ ಜಾಣ ಕುರುಡನ್ನು ಜಾತ್ಯತೀತ ಕೇರಳ ಮನ್ನಿಸುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಹಲವು ವರ್ಷಗಳ ಹಿಂದೆ ಹುಸಿ ಸೆಕ್ಯುಲರಿಸಂನಿಂದ ಮಅದನಿ ಮತ್ತು ಅವರ ರಾಜಕೀಯ ಚಳವಳಿಯು ಮುಂದಿಟ್ಟ ಕಲ್ಪನೆಯನ್ನು ನಾಶಮಾಡಲು ಮೇಲ್ವರ್ಗದ ಫ್ಯಾಶಿಸಂನೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಾದ ಜಾತ್ಯತೀತ ಚಳವಳಿಗಳು ಮಅದನಿಯವರನ್ನು ಕಾರಾಗೃಹಕ್ಕೆ ದೂಡಲು ಸಹಕಾರಿಯಾಯಿತೇ ವಿನಃ ಅವರು ಮುಂದಿಟ್ಟ ಆಶಯಕ್ಕೆ ಮರಣವಿಲ್ಲ ಎಂಬುದು ಭಾರತದಲ್ಲೇ ಸಾಬೀತಾಗುತ್ತಿವೆ. ಈ ನಿಟ್ಟಿನಲ್ಲಿ ರಾಜಕೀಯ, ಸಮುದಾಯ ಸಂಘಟನೆಗಳು, ಮಾಧ್ಯಮಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಎಲ್ಲಾ ಮಾನವ ಪ್ರೇಮಿಗಳು ಮಅದನಿಯವರಿಗೆ ಸಿಗಬೇಕಾದ ಅರ್ಹವಾದ ನ್ಯಾಯಕ್ಕಾಗಿ ಹೋರಾಡಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.