ದುಬೈ, ಆಗಸ್ಟ್ 2 : ಯುಎಇ ಮತ್ತು ಸೌದಿ ಅರೇಬಿಯಾ ನಡುವಿನ ಇತಿಹಾದ್ ವಿಮಾನಗಳನ್ನು ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸಲಾಗಿದೆಯೆಂದು ಅಬುಧಾಬಿ ವಿಮಾನಯಾನ ಸಂಸ್ಥೆ ಸೋಮವಾರ ಮಾಹಿತಿ ನೀಡಿದೆ.
ಇತ್ತೀಚೆಗೆ ಸೌದಿ ಸರ್ಕಾರ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಇತಿಹಾದ್ ಆಗಸ್ಟ್ 10 ರ ವರೆಗೆ ಅಬುಧಾಬಿ ಮತ್ತು ಸೌದಿ ನಡುವಿನ ವಿಮಾನಗಳನ್ನು ರದ್ದುಗೊಳಿಸಿದೆ. ಈಗಾಗಲೇ ಟ್ರಾವಲ್ ಏಜೆಂಟ್ ಮೂಲಕ ಟಿಕೆಟ್ ಖರೀದಿಸಿದ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಅದೇ ಏಜೆಂಟ್ ಅನ್ನು ಸಂಪರ್ಕಿಸುವಂತೆ ಇತಿಹಾದ್ ತಿಳಿಸಿದೆ.
ಸೌದಿ ಅರೇಬಿಯಾದ ಪ್ರವಾಸೋದ್ಯಮ ಸಚಿವಾಲಯವು ಈ ಆಗಸ್ಟ್ 1 ರಿಂದ ಸೌದಿ ವೀಸಾ ಹೊಂದಿರುವವರು ಸೌದಿ ಪ್ರಯಾಣಕ್ಕೆ ಅನುಮತಿಸುವುದಾಗಿ ಹೇಳಿತ್ತು. ಮಾತ್ರವಲ್ಲ ಕೋವಿಡ್ -19 ಹಿನ್ನೆಲೆಯಲ್ಲಿ ಕೆಂಪು ಝೋನ್ ನಲ್ಲಿರುವ ಭಾರತ, ಯುಎಇ ಸೇರಿದಂತೆ 49 ರಾಷ್ಟ್ರಗಳ ಮುಕ್ತ ಪ್ರವೇಶಕ್ಕೆ ನಿಷೇಧ ಮತ್ತು ಭಾರೀ ದಂಡವನ್ನು ಘೋಷಿಸಿದೆ.