ದೇಶದ ಪ್ರಧಾನಿಯೇ ಕೊರೊನ ಸೋಂಕಿಗೆ ಬಲಿ!

Prasthutha|

ಜೊಹಾನ್ಸ್ ಬರ್ಗ್ : ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದ್ದ ಆಫ್ರಿಕಾದ ಎಸ್ವತಿನಿ ದೇಶದ ಪ್ರಧಾನಿ ಅಂಬ್ರೋಸ್ ಡ್ಲಾಮಿನಿ (52) ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಕೊರೊನ ಸೋಂಕಿಗೊಳಗಾಗಿದ್ದ ಅವರು ದಕ್ಷಿಣ ಆಫ್ರಿಕಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪ್ರಧಾನಿ ಅಂಬ್ರೋಸ್ ಡ್ಲಾಮಿನಿ ಅವರು ಮೃತಪಟ್ಟಿದ್ದಾರೆ ಎಂಬ ವಿಚಾರವನ್ನು ರಾಷ್ಟ್ರಕ್ಕೆ ತಿಳಿಸಲು ತನಗೆ ಆದೇಶಿಸಲಾಗಿದೆ ಎಂದು ಉಪ ಪ್ರಧಾನಿ ಥೆಂಬಾ ಮುಸುಕು ಹೇಳಿದ್ದಾರೆ.

- Advertisement -

2018ರ ಅಕ್ಟೋಬರ್ ನಲ್ಲಿ ಎಸ್ವತಿನಿ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಡ್ಲಾಮಿನಿ, ಹಲವು ವರ್ಷಗಳ ಕಾಲ ಬ್ಯಾಂಕೊಂದರಲ್ಲಿ ಸೇವೆ ಸಲ್ಲಿಸಿದ್ದರು.

ಹಿಂದೆ ಸ್ವಾಝಿಲ್ಯಾಂಡ್ ಎಂದು ಕರೆಯಲ್ಪಡುತ್ತಿದ್ದ ಎಸ್ವತಿನಿಯಲ್ಲಿ 1.2 ಮಿಲಿಯನ್ ಜನರಿದ್ದು, ಅವರಲ್ಲಿ 6,700 ಮಂದಿಗೆ ಕೊರೊನ ವೈರಸ್ ಸೋಂಕು ತಗುಲಿದೆ. ಅವರಲ್ಲಿ 127 ಮಂದಿ ಮೃತಪಟ್ಟಿದ್ದಾರೆ.

- Advertisement -