ಬಿಜೆಪಿ ಭಿನ್ನಮತ | ಪಟ್ಟು ಬಿಡದ ಈಶ್ವರಪ್ಪ; ಪತ್ರ ಬರೆದದ್ದನ್ನು ಸಮರ್ಥಿಸಿಕೊಂಡ ಸಚಿವ

Prasthutha|

ಮೈಸೂರು : “ನನ್ನ ಇಲಾಖೆಯ ಅನುದಾನ ನನ್ನ ಗಮನಕ್ಕೆ ತರದೆ ಮುಖ್ಯಮಂತ್ರಿ ಯಡಿಯೂರಪ್ಪ ಬೇರೆ ಇಲಾಖೆಗೆ ನೀಡೋದಕ್ಕೆ ತಿಳಿಸಿದ್ದರಿಂದಾಗಿ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರಾಜ್ಯಪಾಲರು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ. ನಾನು ರೆಬಲ್ ಅಲ್ಲ, ಲಾಯಲ್. ನಾನು ನಿಯಮಗಳ ಪಾಲನಗೆಗಾಗಿ ಇಂತಹ ಪತ್ರವನ್ನು ಬರೆದಿದ್ದೇನೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, “ನಿಯಮಾನುಸಾರ ಅನುದಾನ ಬಿಡುಗಡೆ ಮಾಡಿದ್ದರೆ ನನ್ನ ಆಕ್ಷೇಪವಿರುತ್ತಿರಲಿಲ್ಲ. ಬಜೆಟ್ ನಲ್ಲಿ ಘೋಷಣೆಯಾಗಿರುವ ಹಣವನ್ನು ಆರ್ಥಿಕ ಇಲಾಖೆ ಆಯಾ ಇಲಾಖೆಗೆ ಬಿಡುಗಡೆ ಮಾಡಲಿದೆ. ಆದ್ರೇ ಈ ನಿಯಮವನ್ನು ಮೀರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಧ್ಯಪ್ರವೇಶಿಸಿ, ಕಾನೂನು ನಿಯಮ ಉಲ್ಲಂಘಿಸಿ ಅನುದಾನ ಬಿಡುಗಡೆಗೆ ಪತ್ರದ ಮೂಲಕ ತಿಳಿಸಿದ್ದಾರೆ. ಇದನ್ನು ನಾನು ಆಕ್ಷೇಪಿಸಿದ್ದೇನೆ ಎಂದರು.

ತಡೆ ಹಿಡಿಯಲಾಗಿದ್ದ 65 ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ನನ್ನ ಇಲಾಖೆಯ ಪ್ರಿನ್ಸಿಪಲ್ ಸೆಕ್ರೇಟರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರದಲ್ಲಿ ತಿಳಿಸಿದ್ದರು. ನಮ್ಮ ಸೆಕ್ರೇಟರಿ ನನ್ನನ್ನು ಕೇಳಿದಾಗ ನಿಯಮಾನುಸಾರ ಏನ್ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಿ ಎಂದೆ. ನಾನು ವಿವಿಧ ಅಧಿಕಾರಿಗಳ ಬಳಿ ಮುಖ್ಯಮಂತ್ರಿಗಳ ಈ ಕ್ರಮ ಸರಿನಾ ಎಂಬುದಾಗಿ ಚರ್ಚಿಸಿದಾಗ ನಿಯಮಾನುಸಾರ ತಪ್ಪು ಎಂಬುದಾಗಿ ಗೊತ್ತಾಯಿತು ಎಂದರು.

- Advertisement -

ಇಲಾಖೆಯ ಹಣವನ್ನು ಸಂಬಂಧಿಸಿದ ಸಚಿವರ ಗಮನಕ್ಕೆ ಬಾರದೆಯೇ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದಂತ ಮರಿಸ್ವಾಮಿಗೆ ನಿಯಮ ಬಾಹಿರವಾಗಿ ಬಿಡುಗಡೆಗೆ ಮುಖ್ಯಮಂತ್ರಿಗಳು ಸೂಚಿಸುತ್ತಾರೆ ಅಂದ್ರೇ.. ಎಷ್ಟು ಸರಿ.? ಇದೇ ಕಾರಣಕ್ಕಾಗಿ ನಾನು ಮುಖ್ಯಮಂತ್ರಿಗಳ ನಡೆಯ ಬಗ್ಗೆ ರಾಜ್ಯಪಾಲರಿಗೆ, ನಮ್ಮ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾಗಿ ತಮ್ಮ ಪತ್ರ ಬರೆದ ಕ್ರಮವನ್ನು ಸಮರ್ಥಿಸಿಕೊಂಡರು.

Join Whatsapp