‘ಆರೆಸ್ಸೆಸ್ ಮತ್ತು ಬಿಜೆಪಿ ವಿಷವಿದ್ದ ಹಾಗೆ, ರುಚಿ ನೋಡಿದರೆ ನೀವು ಸಾಯುತ್ತೀರಿ’ : ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
Prasthutha: April 2, 2021

‘ಆರೆಸ್ಸೆಸ್ ಮತ್ತು ಬಿಜೆಪಿಯ ಸಿದ್ಧಾಂತವು ವಿಷಕಾರಿಯಾಗಿದೆ. ತಮಿಳುನಾಡು ಮತ್ತು ಪುದುಚೇರಿಯ ಜನತೆ ಈ ವಿಷವನ್ನು ನಿಮ್ಮ ರಾಜ್ಯಗಳಿಗೆ ಪ್ರವೇಶಿಸಲು ಅವಕಾಶ ನೀಡಬಾರದು. ಅವುಗಳ ರುಚಿ ನೋಡಿದರೆ ನೀವು ಸಾಯುತ್ತೀರಿ’ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಅದು ಹೇಗೋ ಅವರು ಕರ್ನಾಟಕವನ್ನು ಪ್ರವೇಶಿಸಿದ್ದಾರೆ. ಆದರೆ ತಮಿಳು ಜನತೆ ಅದಕ್ಕೆ ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ.
ಚುನಾವಣೆಯ ಪ್ರಚಾರಾರ್ಥ ತಮಿಳುನಾಡಿಗೆ ಆಗಮಿಸಿದ್ದ ವೇಳೆ ಖರ್ಗೆಯವರು ಆರೆಸ್ಸೆಸ್ ಮತ್ತು ಅದರ ರಾಜಕೀಯ ಮುಖವಾಗಿರುವ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
