ಹೊಸದಿಲ್ಲಿ: ಸ್ವೀಡನ್ ಮೂಲದ ಟೆಲಿಕಾಂ ಕಂಪೆನಿ ಎರಿಕ್ಸನ್ ತನ್ನ ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ 8,500 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲು ತೀರ್ಮಾನಿಸಿ ಮೆಮೋ ನೀಡಿದೆ ಎಂದು ಕಂಪೆನಿಯ ಸಿಇಒ ಬೋರ್ಗ್ ಎಕೋಲ್ಮ್ ತಿಳಿಸಿದ್ದಾರೆ.
ಸ್ವೀಡನ್‌ನಲ್ಲಿ 1,400 ಜನರನ್ನು ವಜಾ ಮಾಡಲಾಗಿದೆ. ಉಳಿದ ದೇಶದ ಎರಿಕ್ಸನ್ ಉದ್ಯೋಗಿಗಳಿಗೆ ಮೆಮೋ ಜಾರಿ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಅಲ್ಲಿನ ಕಾರ್ಮಿಕ ಕಾಯ್ದೆ ಅನುಸಾರ ಉಳಿದ 7,600 ಜನರನ್ನು ಜಗತ್ತಿನಾದ್ಯಂತ ಕಂಪೆನಿಯು ಕೆಲಸದಿಂದ ತೆಗೆದು ಹಾಕಲಿದೆ ಎಂದು ಎಕೋಲ್ಮ್ ತಿಳಿಸಿದರು.