ಅಮಿತ್ ಶಾ Rallyಗೆ ಹೋಗಿದ್ದ ಬಸ್’ಗಳಿಗೆ ಟ್ರಕ್ ಡಿಕ್ಕಿ: 14 ಮಂದಿ ಮೃತ್ಯು, 50ಕ್ಕೂ ಅಧಿಕ ಮಂದಿಗೆ ಗಾಯ

Prasthutha|

ಮಧ್ಯಪ್ರದೇಶ: ನಿಂತಿದ್ದ ಬಸ್’ಗಳಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಮೃತಪಟ್ಟಿರುವ ಘಟನೆ ಮೊಹಾನಿಯಾ ಸುರಂಗದ ಬಳಿ ನಡೆದಿದೆ.

- Advertisement -

ಈ ದುರ್ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೃಹ ಸಚಿವ ಅಮಿತ್ ಶಾ ಅವರ ಜಾಥಾಕ್ಕೆ ತೆರಳಿದ್ದ ಬಸ್ ವಾಪಸ್ ಆಗುತ್ತಿದ್ದವು. ಈ ವೇಳೆ, ಬಸ್ ಚಾಲಕರು ಸುರಂಗ ಮಾರ್ಗದ ಬಳಿ ಬಸ್ ಗಳನ್ನು ನಿಲ್ಲಿಸಿದ್ದಾರೆ. ಆಗ ಎದುರಗಡೆಯಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

- Advertisement -

ಸತ್ನಾ ಜಿಲ್ಲೆಯಲ್ಲಿ ಆಯೋಜಿಸಲಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಲವರು ಬಸ್’ಗಳಲ್ಲಿ ನೇರವಾಗಿ ಸಿಧಿ ಜಿಲ್ಲೆಗೆ ತೆರಳಿದ್ದರು. ನಂತರ ಪ್ರಯಾಣಿಕರನ್ನು ಹೊತ್ತ ಬಸ್’​​​ಗಳು ಕಾರ್ಯಕ್ರಮ ಮುಗಿದ ನಂತರ ಸತ್ನಾದಿಂದ ಪ್ರಯಾಣಿಕರ ಸ್ವಗ್ರಾಮದತ್ತ ಪ್ರಯಾಣ ಬೆಳೆಸಿದ್ದವು. ಬಸ್ ನೇರವಾಗಿ ರೇವಾ ಮೂಲಕ ಹೋಗುತ್ತಿದ್ದ ಸಂದರ್ಭದಲ್ಲಿ ಸಿಧಿ ಜಿಲ್ಲೆಯ ಮೊಹಾನಿಯಾ ಸುರಂಗವನ್ನು ದಾಟಿತ್ತು.

ಸುರಂಗ ದಾಟಿದ ತಕ್ಷಣ ಬಸ್ಸುಗಳನ್ನು ಡ್ರೈವರ್​’ಗಳನ್ನು ನಿಲ್ಲಿಸಿದ್ದರು. ಇದೇ ವೇಳೆ, ರೇವಾ ಕಡೆಯಿಂದ ಬರುತ್ತಿದ್ದ ಟ್ರಕ್‌ ಬರುತ್ತಿತ್ತು. ಬಸ್​ ಬಳಿ ಬರುತ್ತಿದ್ದಂತೆ ಟ್ರಕ್​’ನ ಟೈರ್‌ ಒಡೆದಿದ್ದು, ವಾಹನದ ನಿಯಂತ್ರಣ ತಪ್ಪಿ ಸುರಂಗ ಮಾರ್ಗದ ಬಳಿ ನಿಂತಿದ್ದ ಬಸ್‌’ಗೆ ಡಿಕ್ಕಿ ಹೊಡೆದಿದೆ. ಟ್ರಕ್‌’ಗೆ ಡಿಕ್ಕಿಯಾದ ರಭಸಕ್ಕೆ ಅಲ್ಲಿ ನಿಂತಿದ್ದ ಮೂರು ಬಸ್‌’ಗಳು ಪರಸ್ಪರ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.

ಆಸ್ಪತ್ರೆಗಳು ಅಲರ್ಟ್‌: ಈ ಭೀಕರ ಅಪಘಾತದ ವಿಷಯ ತಿಳಿದ ತಕ್ಷಣ ಉನ್ನತ ಅಧಿಕಾರಿಗಳು ಸಮೀಪದ ದೊಡ್ಡ ಆಸ್ಪತ್ರೆಗಳನ್ನೆಲ್ಲಾ ಅಲರ್ಟ್‌ ಮೋಡ್‌’ನಲ್ಲಿ ಇರಿಸಿದ್ದರು. ಇದಲ್ಲದೇ ಹಲವು ಆಂಬ್ಯುಲೆನ್ಸ್ ವಾಹನಗಳೂ ಸ್ಥಳಕ್ಕೆ ಆಗಮಿಸಿದವು. ಘಟನೆ ಕುರಿತು ಮಾಹಿತಿ ಪಡೆದ ಸಮೀಪದ ಗ್ರಾಮಗಳ ಜನರು ಕೂಡ ಸ್ಥಳದಲ್ಲಿ ಜಮಾಯಿಸಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಗಾಯಗೊಂಡವರಲ್ಲಿ ವಯಸ್ಕರೂ ಇದ್ದಾರೆ ಎಂದು ಹೇಳಲಾಗಿದ್ದು, ರೇವಾದ ಸಂಜಯ್ ಗಾಂಧಿ ಆಸ್ಪತ್ರೆ ಮತ್ತು ಸಿಧಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಂಡಕ್ಕೆ ಎಲ್ಲಾ ತುರ್ತು ಸೇವೆಗಳೊಂದಿಗೆ ಸಿದ್ಧರಾಗಿರಲು ಅಧಿಕಾರಿಗಳು ಸೂಚನೆ ನೀಡಿದ್ದರು. ಕೂಡಲೇ ಗಾಯಾಳುಗಳನ್ನು ಆಯಾ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿದ್ದಿಯಲ್ಲಿ ಬಸ್ ಪಲ್ಟಿಯಾಗಿ ಸಂಭವಿಸಿದ ಅಪಘಾತದ ಬಗ್ಗೆ ಅತ್ಯಂತ ದುಃಖದ ಸುದ್ದಿ ಬಂದಿದೆ. ದೇವರು ಅಗಲಿದ ಆತ್ಮಗಳಿಗೆ ಅವರ ಪುಣ್ಯ ಪಾದದಲ್ಲಿ ಸ್ಥಾನ ನೀಡಲಿ ಮತ್ತು ಕುಟುಂಬ ಸದಸ್ಯರಿಗೆ ಈ ಆಳವಾದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.

ಪರಿಹಾರ ಘೋಷಣೆ:

ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ಹಾಗೂ ಸಾಮಾನ್ಯ ಗಾಯಾಳುಗಳಿಗೆ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಅಷ್ಟೇ ಅಲ್ಲ, ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

Join Whatsapp