ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಕೋವಿಡ್ ನೆಗೆಟಿವ್‌ ರಿಪೋರ್ಟ್‌ ಅಥವಾ 2 ಡೋಸ್‌ ಲಸಿಕೆ ಕಡ್ಡಾಯ

Prasthutha|

ಹೊಸದಿಲ್ಲಿ: ಭಾನುವಾರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕವೂ ಸೇರಿದಂತೆ ದೇಶದ ಹಲವೆಡೆ ನಡೆದ ಉಪಚುನಾವಣೆಗಳ ಮತ ಎಣಿಕೆ ನಡೆಯಲಿದೆ. ಈ ವೇಳೆ ಮತ ಎಣಿಕೆ ಕೇಂದ್ರ ಪ್ರವೇಶಿಸಿಲು ಅಭ್ಯರ್ಥಿಗಳು ಕೊರೊನಾ ನೆಗೆಟಿವ್‌ ವರದಿ ಅಥವಾ ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣ ಪತ್ರ ನೀಡುವುದು ಕಡ್ಡಾಯ ಎಂದು ಚುನಾವಣಾ ಆಯೋಗ ಬುಧವಾರ ಹೇಳಿದೆ. ಜತೆಗೆ ಈಗಾಗಲೇ ಮತ ಎಣಿಕೆ ನಂತರ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿದೆ. ಮೇ 2ರಂದು ಮತ ಎಣಿಕೆ ಕೇಂದ್ರದ ಹೊರಗೆ ಜನ ಸೇರುವುದನ್ನು ನಿಷೇಧಿಸಿದೆ.

- Advertisement -

ಮತ ಎಣಿಕೆ ಸಂಬಂಧ ಹೊಸ ಮಾರ್ಗಸೂಚಿಯನ್ನು ಚುನಾವಣಾ ಆಯೋಗ ಬುಧವಾರ ಬಿಡುಗಡೆ ಮಾಡಿದ್ದು, ಮತ ಎಣಿಕೆ ಕೇಂದ್ರದ ಹೊರಗೆ ಮೇ 2ರಂದು (ಭಾನುವಾರ) ಜನ ಸೇರುವುದನ್ನು ನಿಷೇಧಿಸಿದೆ. ಅಭ್ಯರ್ಥಿಗಳು ಮತ್ತು ಅವರ ಏಜಂಟರುಗಳು ಎರಡು ಡೋಸ್‌ ಲಸಿಕೆ ಪಡೆದಿದ್ದಲ್ಲಿ ಅಥವಾ 48 ಗಂಟೆಗಳ ಒಳಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್‌ ವರದಿ ಬಂದಿದ್ದಲ್ಲಿ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಪ್ರವೇಶ ನೀಡಲಾಗುವುದು ಎಂದು ಹೇಳಿದೆ.

ಅಭ್ಯರ್ಥಿಗಳು ಮೂರು ದಿನ ಮೊದಲೇ ತಮ್ಮ ಏಜೆಂಟರ ಪಟ್ಟಿಯನ್ನು ನೀಡಬೇಕು ಎಂದು ತಿಳಿಸಿದೆ. ಮಂಗಳವಾರವಷ್ಟೆ ಆಯೋಗ ಚುನಾವಣಾ ಫಲಿತಾಂಶದ ಬಳಿಕ ವಿಜಯೋತ್ಸವ ಆಚರಣೆ ಮಾಡುವಂತಿಲ್ಲ ಎಂದು ಹೇಳಿತ್ತು.

- Advertisement -

ಈಗಾಗಲೇ ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೆರಿಯಲ್ಲಿ ಮತದಾನ ಪೂರ್ಣಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಮತದಾನ ನಾಳೆ ಅಂದರೆ ಏಪ್ರಿಲ್‌ 29ರ ಗುರುವಾರ ನಡೆಯಲಿದೆ. ಇದಾದ ಬಳಿಕ ಭಾನುವಾರ ಮತ ಎಣಿಕೆ ನಡೆಯಲಿದೆ.

Join Whatsapp