ಗಣರಾಜ್ಯೋತ್ಸವ ಪರೇಡ್’ನಲ್ಲಿ ಹೆಜ್ಜೆ ಹಾಕಿದ ಈಜಿಪ್ಟ್ ಸೇನಾ ತುಕಡಿ

Prasthutha|

ನವದೆಹಲಿ: 74 ನೇ ಗಣರಾಜ್ಯೋತ್ಸವದಲ್ಲಿ ಈಜಿಪ್ಟ್ ನ ಸೇನಾ ತುಕಡಿ ಇದೇ ಪ್ರಥಮ ಬಾರಿಗೆ ಕರ್ತವ್ಯ ಪಥದಲ್ಲಿ ಪರೇಡ್ ನಡೆಸಿತು.

- Advertisement -

ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಸಿಸಿ ಅವರು ಈ ಸಲದ ಮುಖ್ಯ ಅತಿಥಿಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಈಜಿಪ್ಟ್ ಸೇನಾ ತುಕಡಿ ಪರೇಡ್ ನಲ್ಲಿ ಭಾಗವಹಿಸಿತು.

144 ಸೈನಿಕರನ್ನು ಒಳಗೊಂಡ ಕರ್ನಲ್ ಮಹಮೂದ್ ಮುಹಮ್ಮದ್ ಅಬ್ದೆಲ್ ಫತ್ತಾಹ್ ಎಲ್ ಖರಾಸಾವಿ ನೇತೃತ್ವದ ಈಜಿಪ್ಟ್ ಮಿಲಿಟರಿ ತುಕಡಿ ಈಜಿಪ್ಟ್ ಸಶಸ್ತ್ರ ಪಡೆಗಳ ಮುಖ್ಯ ತುಕಡಿಯಾಗಿದೆ.

Join Whatsapp