ಅರಸೀಕೆರೆಯಲ್ಲಿ SDPIನಿಂದ ಗಣರಾಜ್ಯೋತ್ಸವ ಆಚರಣೆ

Prasthutha|

ಹಾಸನ: ಅರಸೀಕೆರೆ SDPI ವತಿಯಿಂದ ಗಣರಾಜ್ಯ ಸಂರಕ್ಷರಾಗೋಣ ಎಂಬ ಘೋಷವಾಕ್ಯದೊಂದಿಗೆ 74ನೇ ಗಣರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

- Advertisement -

  ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ಅರಸೀಕೆರೆ ತಾಲೂಕು ಅಧ್ಯಕ್ಷ ಆಜ್ಗರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕೋಮುವಾದಿಗಳಿಂದ ಸಂವಿಧಾನವನ್ನು ರಕ್ಷಿಸಲು ನಾವೆಲ್ಲಾ ಸಿದ್ಧರಾಗಬೇಕೆಂದು ಕರೆ ನೀಡಿದರು.

ಈ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಜಗತ್ತಿನಲ್ಲಿಯೇ ಅತ್ಯುತ್ತಮ ವ್ಯವಸ್ಥೆಯಾಗಿದ್ದು,  ಎಲ್ಲರೂ ಏಕತಾ ಮನೋಭಾವನೆಯಲ್ಲಿ ಹೋರಾಡಿದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಎಲ್ಲಾ ಜನಾಂಗದವರು ಸಹಬಾಳ್ವೆಯನ್ನು ಬಾಳುವುದು ನಮ್ಮ ಸಂವಿಧಾನದ ಆಶಯವಾಗಿದೆ. ಗಣರಾಜ್ಯವನ್ನು ರಕ್ಷಿಸುವ ಮೂಲಕ ಸಂವಿಧಾನ ರಕ್ಷಣೆ ಮಾಡಬೇಕು ಎಂದು ಹೇಳಿದರು

- Advertisement -

  ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಸ್ಟರ್ ರಾಜು ಮಾತನಾಡಿ, ಜಾತ್ಯತೀತ ತತ್ವವನ್ನು  ಸಂವಿಧಾನ ಮೂಲ ಆಶಯವಾಗಿದ್ದು, ಇದನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.

 SDPI ಅರಸೀಕೆರೆ ಉಪಾಧ್ಯಕ್ಷ  ಸಲ್ಮಾನ್ ಸ್ವಾಗತಕೋರಿದರು. SDPI ಕಾರ್ಯದರ್ಶಿ ಯಾಸಿನ್ ವಂದಿಸಿದರು. ಖಜಾಂಚಿ ಮತೀನ್ ಕಾರ್ಯಕ್ರಮ ನಿರೂಪಿಸಿದರು. ಮುಖಂಡರಾದ ಜಕಾವುಲ್ಲ, ನಿಜಾಮ್, ಇಸ್ಮಾಯಿಲ್, ಜಭಿ ಇಮ್ರಾನ್ ಮುಬಾರಕ್, ಮತ್ತಿತರರು ಉಪಸ್ಥಿತರಿದ್ದರು.

Join Whatsapp