ಇಡಿಯಿಂದ ಕಾಂಗ್ರೆಸ್ ನಾಯಕರ ನಿರಂತರ ಬೇಟೆ: ಇದು ರಾಜಕೀಯ ಸೇಡು ಎಂದ ಸಿದ್ದರಾಮಯ್ಯ

Prasthutha|

ಬೆಂಗಳೂರು: ರಾಹುಲ್ ಗಾಂಧೀ, ಸೋನಿಯಾ ಗಾಂಧೀ ಬಳಿಕ ಇದೀಗ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ  ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಡಿ ವಿಚಾರಣೆ ನಡೆಸುತ್ತಿದ್ದು , ಬಿಜೆಪಿಯು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ತನ್ನ ರಾಜಕೀಯ ಸೇಡನ್ನು ತೀರಿಸುತ್ತಿದೆ ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

- Advertisement -

ಸಂಸತ್ ಅಧಿವೇಶನದಲ್ಲಿ ಇರುವಾಗಲೇ ವಿಪಕ್ಷ ನಾಯಕರಾದ ಖರ್ಗೆ ಅವರಿಗೆ ಇಡಿ ಸಮನ್ಸ್ ನೀಡಿದೆ. ಸರಕಾರದ ವೈಫಲ್ಯವನ್ನು ಜನರಿಗೆ ಬೆಳಕಿಗೆ ತರುವ ನಮ್ಮ ನಾಯಕರನ್ನು ಬಿಜೆಪಿ ಕೇಂದ್ರ ಸ್ವಾಧೀನ ಸಂಸ್ಥೆಗಳ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದು ಸಂಸತ್ತಿನ ಅಧಿವೇಶನವನ್ನು ಅಡ್ಡಿಪಡಿಸಲು ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯು ಹೆಣೆದ ತಂತ್ರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಖರ್ಗೆ ವಿಚಾರಣೆ ಕುರಿತು ಸರಣಿ ಟ್ವೀಟ್ ಮಾಡುತ್ತಿರುವ ಸಿದ್ದು, ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

Join Whatsapp