ಪಶ್ಚಿಮ ಬಂಗಾಳ ಸಚಿವರ ಮನೆ ಮೇಲೆ ಇಡಿ ದಾಳಿ

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಹಾರ ಮತ್ತು ಸರಬರಾಜು ಸಚಿವ ರಥಿನ್ ಘೋಷ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿದೆ.

- Advertisement -


ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ರಾಜ್ಯದ ನಾಗರಿಕ ಸಂಸ್ಥೆಗಳ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಭದ್ರತಾ ಪಡೆಗಳ ತುಕಡಿಯೊಂದಿಗೆ ತನಿಖಾಧಿಕಾರಿಗಳು ಘೋಷ್ ಅವರ ಮನೆ ಮೇಲೆ ಬೆಳಿಗ್ಗೆ 6:10 ರ ಸುಮಾರಿಗೆ ದಾಳಿ ನಡೆಸಿದ್ದಾರೆ. ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ 12 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.

- Advertisement -

ಮಧ್ಯಮಗ್ರಾಮದ ಟಿಎಂಸಿ (TMC) ಶಾಸಕ ಘೋಷ್ ಅವರು ಈ ಹಿಂದೆ ಅಲ್ಲಿನ ಪುರಸಭೆಯ ಪದಾಧಿಕಾರಿಯಾಗಿದ್ದರು. 2014 ಮತ್ತು 2018ರ ನಡುವೆ ರಾಜ್ಯದ ವಿವಿಧ ನಾಗರಿಕ ಸಂಸ್ಥೆಗಳ ನಿಯಮದ ವಿರುದ್ಧವಾಗಿ ಸುಮಾರು 1,500 ಜನರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

Join Whatsapp