ಶಿವಮೊಗ್ಗ ಗಲಾಟೆಯನ್ನು ಬಿಜೆಪಿ ವೈಭವೀಕರಿಸುತ್ತಿದೆ: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ಶಿವಮೊಗ್ಗ ಗಲಾಟೆಯನ್ನು ಬಿಜೆಪಿ ವೈಭವೀಕರಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಟೀಕಿಸಿದ್ದಾರೆ.

- Advertisement -


ಶಿವಮೊಗ್ಗ ಘಟನೆಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದಾದ ನಂತರವೂ ಬಿಜೆಪಿ ನಾಯಕರು ಘಟನೆಯನ್ನು ವೈಭವೀಕರಿಸುತ್ತಿದ್ದಾರೆ. ಯಾಕೆ ಈ ವೈಭವೀಕರಣ? ಇದು ರಾಜಕೀಯ ಲಾಭಕ್ಕಾಗಿಯೇ? ಅಥವಾ ಯಾವುದೇ ಸಾವು ಸಂಭವಿಸಿಲ್ಲ ಎಂದು ನೀವು (ಬಿಜೆಪಿ) ಹತಾಶರಾಗಿದ್ದೀರಾ? ಎಂದು ಸಚಿವರು ಪ್ರಶ್ನಿಸಿದರು.


‘ಈ ಘಟನೆಯಲ್ಲಿ ಯಾರಾದರೂ ಸಾಯುತ್ತಾರೆ ಎಂದು ಬಿಜೆಪಿ ಕುತೂಹಲದಿಂದ ಎದುರು ನೋಡುತ್ತಿತ್ತು. ಇಡೀ ದೇಶದಲ್ಲಿ ಮೃತದೇಹಗಳ ಮೇಲೆ ರಾಜಕೀಯ ಮಾಡುವುದರಲ್ಲಿ ಅವರು ಪರಿಣಿತರು. ರಾಜ್ಯದಲ್ಲಿ ಯಾರೇ ಸತ್ತರೂ, ಮಳೆಗಾಲದಲ್ಲಿ ಜಿಗಣೆಗಳು ಹೇಗೆ ಇದ್ದಕ್ಕಿದ್ದಂತೆ ಹುಟ್ಟುತ್ತವೆಯೋ ಹಾಗೆ ಬಿಜೆಪಿ ನಾಯಕರು ಕ್ರಿಯಾಶೀಲರಾಗುತ್ತಾರೆ’ ಎಂದು ಅವರು ಹೇಳಿದರು.

- Advertisement -


ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಶಿವಮೊಗ್ಗದಲ್ಲಿ ನಡೆದಂತಹ ಘಟನೆಗಳು ರಾಜ್ಯದಲ್ಲಿ ವರದಿಯಾಗಿವೆ. ನಂತರ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುವ ಭರವಸೆ ಮಾತ್ರ ನೀಡಿತ್ತು. ಆದರೆ, ನಮ್ಮ ಸರ್ಕಾರ ಯಾವುದೇ ಕರುಣೆ ತೋರದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು