ಬೆಂಗಳೂರಿನಲ್ಲಿ ಬಾಕಿ ಕಾಮಗಾರಿಗಳನ್ನು ಬೇಗನೇ ಮುಗಿಸಿ: ಗುತ್ತಿಗೆದಾರರಿಗೆ ಶಿವಕುಮಾರ್ ಸೂಚನೆ

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ಬಾಕಿ ಕಾಮಗಾರಿಗಳನ್ನು ಬೇಗನೇ ಮುಗಿಸಿ ಎಂದು ಇಂಜಿನಿಯರುಗಳು ಮತ್ತು ಗುತ್ತಿಗೆದಾರರಿಗೆ ಉಪ ಮುಖ್ಯಮಂತ್ರಿ, ಬೆಂಗಳೂರು ಉಸ್ತುವಾರಿ ಸಚಿವರೂ ಆದ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

- Advertisement -


ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯಕ್ಕೆ ಮಳೆ ನಿಂತಿದ್ದು, ಮತ್ತೆ ಸದ್ಯದಲ್ಲೇ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಮಳೆ ಆರಂಭವಾಗುವ ಹೊತ್ತಿಗೆ ಎಲ್ಲಾ ಕಾಮಗಾರಿ ಕೆಲಸ ಮುಗಿಸಲು ಸೂಚನೆ ನೀಡಿದ್ದೇನೆ. ಅಪ್ರೂವಲ್ ಆಗಿದ್ದ ಕೆಲಸಗಳು ನಿಂತಿದ್ದವು. ಮತ್ತೆ ಆರಂಭಗೊಳಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಒಟ್ಟಾರೆ 5000 ಕೋಟಿ ರೂ ಕಾಮಗಾರಿ ಕೆಲಸ ನಿಂತಿತ್ತು. ಅದನ್ನ ಆರಂಭಿಸಲು ಹೇಳಿದ್ದೇನೆ. ಸರ್ಕಾರದ ಬಿಲ್ ಗಳು 50 % ರಿಲೀಸ್ ಮಾಡಲಿದ್ದೇವೆ. 675 ಕೋಟಿ ರೂ ಗಳನ್ನ ಬಿಡುಗಡೆ ಮಾಡುತ್ತೇವೆ. 432 ಕೋಟಿ ಬಿಬಿಎಂಪಿ ಕಾಮಗಾರಿ ಬಿಲ್ ಬಿಡುಗಡೆ ಮಾಡುತ್ತೇವೆ. ಇಂಜಿನಿಯರುಗಳು ಮತ್ತು ಗುತ್ತಿಗೆದಾರರಿಗೆ ಕಾಮಗಾರಿ ಬೇಗನೇ ಮುಗಿಸುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.