ಗಣಿ ಉದ್ಯಮಿ ಖಾರದಪುಡಿ ಮಹೇಶ್​ ಗೆ ಸೇರಿದ 17.24 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

Prasthutha|

ವಿಜಯನಗರ: ಅಕ್ರಮ‌ ಗಣಿಗಾರಿಕೆಯಲ್ಲಿ ಭಾಗಿಯಾಗಿ ಸರ್ಕಾರದ ಬೊಕ್ಕಸಕ್ಕೆ 103 ಕೋಟಿ ರೂ. ನಷ್ಟ ಉಂಟುಮಾಡಿರುವ ಆರೋಪ ಎದುರಿಸುತ್ತಿರುವ ಗಣಿ ಉದ್ಯಮಿ ಖಾರದಪುಡಿ ಮಹೇಶ್​ ಅವರಿಗೆ ಸೇರಿದ 17.24 ಕೋಟಿ ಮೌಲ್ಯದ ಆಸ್ತಿಯನ್ನು ಗುರುವಾರ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಆರೋಪವನ್ನು ಮಹೇಶ್ ಎದುರಿಸುತ್ತಿದ್ದಾರೆ.

- Advertisement -

ಜಾರಿ ನಿರ್ದೇಶನಾಲಯದಿಂದ ಆಸ್ತಿ ಜಪ್ತಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಖಾರದಪುಡಿ ಮಹೇಶ್, ನಾವು ಕಾನೂನು ಬದ್ದವಾಗಿದ್ದೇವೆ. ಕಾನೂನಿಗೆ ತೆಲೆ ಬಾಗಿಸುತ್ತೇವೆ. ನಮ್ಮ ಮೇಲೆ ಮತ್ತೆ ಮತ್ತೆ ಪ್ರಕರಣ ದಾಖಲಿಸುತ್ತಿದ್ದಾರೆ. ನಾವು ಕೇವಲ ಟಾನ್ಸ್ ಪೋರ್ಟರ್ಸ್​​ಗಳು. ನಾವು ಅಕ್ರಮ ಮಾಡಿಲ್ಲ. ಅತಿ ಶ್ರೀಘ್ರದಲ್ಲೇ ನಾವು ದೋಷಮುಕ್ತರಾಗಿ ಬರುತ್ತೇವೆ ಎಂದರು.



Join Whatsapp