ಹಫ್ತಾ ವಸೂಲಿಗೆ ಒತ್ತಡ ಹೇರುತ್ತಿರುವ ಮೇಲಾಧಿಕಾರಿಗಳು : ಕಾನ್​ಸ್ಟೇಬಲ್​ ಆತ್ಮಹತ್ಯೆಗೆ ಯತ್ನ

Prasthutha|

ಕಲಬುರಗಿ: ಹಿರಿಯ ಪೊಲೀಸ್ ಅಧಿಕಾರಿಗಳು, ಮೇಲಧಿಕಾರಿಗಳು ನಮ್ಮನ್ನು ಹಫ್ತಾ ವಸೂಲಿ ಮಾಡಲು ಕಳುಹಿಸುತ್ತಾರೆ. ಹಾಗೆ ಸಂಗ್ರಹಿಸಿದ ಹಣವನ್ನು ನಾಯಕರಿಗೆ ಕೊಟ್ಟು ಬರುತ್ತಾರೆ ಎಂದು ಕಲಬುರಗಿಯ ಪೊಲೀಸ್ ಕಾನ್​ಸ್ಟೇಬಲ್​​ಗಳು ಗುರುವಾರ ಆರೋಪಿಸಿದ್ದಾರೆ.

- Advertisement -

ಕಲಬುರಗಿ ನಗರದ ಸಂಚಾರಿ ಠಾಣೆ 1 ರಲ್ಲಿ ಕಾನಸ್ಟೇಬಲ್ ಆಗಿರುವ ಚಂದ್ರಕಾಂತ್ ಎಂಬವರು, ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡಿರುವ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮೇಲಾಧಿಕಾರಿಗಳು ನಮ್ಮನ್ನು ಹಪ್ತಾ ವಸೂಲಿ ಮಾಡಲು ಕಳುಹಿಸುತ್ತಾರೆ. ಮರಳು ಹಪ್ತಾ, ವೈನ್ ಶಾಪ್ ಹಪ್ತಾ ವಸೂಲಿ ಮಾಡಿಸುತ್ತಾರೆ. ಪಿಎಸ್​​​ಐ, ಸಿಪಿಐ, ಡಿಎಸ್ಪಿ ಅವರು ಒತ್ತಡ ಹೇರುತ್ತಿದ್ದಾರೆ. ಬಳಿಕ ಲೀಡರ್​​ಗಳಿಗೆ ದುಡ್ಡು ಕೊಟ್ಟು ಬರುತ್ತಾರೆ’ ಎಂದು ಕಾನ್​ಸ್ಟೇಬಲ್​ಗಳು ಆರೋಪಿಸಿದ್ದಾರೆ.

- Advertisement -

ಇನ್ನು ಆತ್ಮಹತ್ಯೆಗೆ ಯತ್ನಿಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಕಾಂತ ಅವರನ್ನು ಫರಹತಾಬಾದ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ನಮ್ಮ ಮೇಲಾಧಿಕಾರಿಗಳೇ ಸುಳ್ಳು ಹೇಳಿ ವರ್ಗಾವಣೆ ಮಾಡಿಸಿದ್ದಾರೆ ಎಂದು ಚಂದ್ರಕಾಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 59 ಕಾನಸ್ಟೇಬಲ್​​ಗಳನ್ನು ವರ್ಗಾವಣೆ ಮಾಡಲಾಗಿದೆ. ತಮಗೆ ಬೇಡವಾದವರನ್ನು ವರ್ಗಾವಣೆ ಮಾಡಿಸಿದ್ದಾರೆ. ಮೇಲಾಧಿಕಾರಿಗಳು ವರ್ಗಾವಣೆ ಮಾಡಿಸಿದ್ದಾರೆ ಎಂದು ಕಾನಸ್ಟೇಬಲ್​ಗಳು ಆರೋಪ ಮಾಡಿದ್ದಾರೆ.

Join Whatsapp