ಯೆಸ್ ಬ್ಯಾಂಕ್ ಸಾಲ ವಂಚನೆ ಪ್ರಕರಣ: ಉದ್ಯಮಿ ಗೌತಂ ಥಾಪರ್ ಇಡಿ ವಶಕ್ಕೆ

Prasthutha|

ದೆಹಲಿ: ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಉದ್ಯಮಿ ಗೌತಮ್ ಥಾಪರ್ ರನ್ನು ಯೆಸ್ ಬ್ಯಾಂಕ್ ಲೋನ್ ಗೋಲ್ ಮಾಲಿಗೆ ಸಂಬಂಧಿಸಿದಂತೆ 14 ದಿನಗಳ ಕಾಲ ಇಡಿ- ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ. ಜಾರಿ ನಿರ್ದೇಶನಾಲಯ ಆರೋಪಿಯ ವಿಚಾರಣೆಯನ್ನು ಮುಂದುವರಿಸಿದೆ.

- Advertisement -

ಈ ಸಂಬಂಧ ಗೌತಮ್ ಅವರ ವಕೀಲ ಸಂದೀಪ್ ಕಪೂರ್ ಅವರು ಈ ಕೇಸಿನಲ್ಲಿ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ವಾದಿಸಿದ್ದರು. ಅವಂತ ಗ್ರೂಪ್ ಸಂಸ್ಥೆಗಳ ಸ್ಥಾಪಕ ಗೌತಮ್ ರನ್ನು ಜಾರಿ ನಿರ್ದೇಶನಾಲಯದವರು ಆಗಸ್ಟ್ ಮೊದಲ ವಾರ ಬಂಧಿಸಿದ್ದರು.

ಅವಂತ ರಿಯಾಲ್ಟಿ ಮತ್ತು ಯೆಸ್ ಬ್ಯಾಂಕ್ ಸಹ ಸ್ಥಾಪಕ ರಾಣಾ ಕಪೂರ್ ನಡುವೆ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಮೊದಲೇ ರಾಣಾ ಕಪೂರ್ ಮತ್ತವರ ಪತ್ನಿ ದೆಹಲಿಯ ಪ್ರಮುಖ ಸ್ಥಳದಲ್ಲಿ ಜಾಗ ಹೊಂದಿರುವುದರ ವಿಚಾರಣೆ ಎದುರಿಸುತ್ತಿದ್ದಾರೆ. ಇದು ಅಕ್ರಮ ಹಣ ವರ್ಗಾವಣೆ ವ್ಯವಹಾರ ಆಗಿದ್ದು, ಕಪೂರ್ ಶೇರ್ ಗಿಲ್ ಎಂಬ ಕಂಪೆನಿ ಹೆಸರಿನಲ್ಲಿ ರೂ. 1,900 ಕೋಟಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ರೂ. 307 ಕೋಟಿ ದಲ್ಲಾಳಿ ಹಣ ಸಂದಿರುವುದಾಗಿ ಆರೋಪ ಇದೆ.

Join Whatsapp