ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಖನೌ ಸೂಪರ್‌ ಜೈಂಟ್ಸ್‌ಗೆ ಸುಲಭ ಜಯ

Prasthutha|

ಲಖನೌ: ನಾಯಕ ಕೆ.ಎಲ್‌.ರಾಹುಲ್ (82) ಮತ್ತು ಕ್ವಿಂಟನ್‌ ಡಿಕಾಕ್‌ (54) ಅವರ ಅರ್ಧ ಶತಕಗಳ ನೆರವಿನಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡ, ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ.

- Advertisement -

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ177 ರನ್‌ಗಳ ಗುರಿಯನ್ನು ಬೆಂಬತ್ತಿದ ಲಖನೌಗೆ ರಾಹುಲ್ ಮತ್ತು ವಿಕೆಟ್‌ ಕೀಪರ್‌ ಕ್ವಿಂಟನ್‌ ಡಿಕಾಕ್‌ ಆಸರೆಯಾದರು. ಅವರು 15 ಓವರುಗಳಲ್ಲಿ ಮೊದಲ ವಿಕೆಟ್‌ಗೆ 134 ರನ್‌ ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು. ಅವರು ಹಾಕಿದ ಅಡಿಪಾಯದ ಮೇಲೆ ತಂಡವು 19 ಓವರುಗಳಲ್ಲಿ 2 ವಿಕೆಟ್‌ಗೆ 180 ರನ್ ಗಳಿಸಿತು.

ಇದಕ್ಕೆ ಮೊದಲು ಚೆನ್ನೈ ಸೂಪರ್‌ ಕಿಂಗ್ಸ್ ತಂಡ 20 ಓವರುಗಳಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಲಷ್ಟೇ ಶಕ್ತವಾಗಿತ್ತು

- Advertisement -

ಆರಂಭದಿಂದಲೇ ವೇಗವಾಗಿ ರನ್ ಗಳಿಸುತ್ತ ಹೋದ ರಾಹುಲ್ ಮತ್ತು ಡಿಕಾಕ್‌ ಪವರ್‌ ಪ್ಲೇ ಅವಧಿಯಲ್ಲಿ 54 ರನ್‌ಗಳು ಬಂದವು. ರಾಹುಲ್ ಶತಕ ವಂಚಿತರಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಕಾಣಿಕೆ ನೀಡಿದರು.

ಇದಕ್ಕೆ ಮೊದಲು, ಚೆನ್ನೈ ತಂಡವು ಆಲ್‌ರೌಂಡರ್ ರವೀಂದ್ರ ಜಡೇಜ (ಔಟಾಗದೆ 57, 40ಎಸೆತ) ಅವರ ತಾಳ್ಮೆಯ ಅರ್ಧ ಶತಕ ಮತ್ತು ಕೊನೆಯ ಹಂತದಲ್ಲಿ ಮಹೇಂದ್ರಸಿಂಗ್ ಧೋನಿ (ಔಟಾಗದೇ 28, 9ಎಸೆತ) ಬೀಸಾಟದಿಂದಾಗಿ ಹೋರಾಟದ ಮೊತ್ತ ದಾಖಲಿಸಿತ್ತು.

Join Whatsapp