ಟರ್ಕಿ ಭೂಕಂಪದಿಂದ ಉಂಟಾದ ನಷ್ಟವೆಷ್ಟು ಗೊತ್ತೇ?

Prasthutha|

ಅಂಕಾರಾ: ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಉಂಟಾದ ನಷ್ಟವು ಸುಮಾರು 100 ಶತಕೋಟಿ ಡಾಲರ್‌ಗಳನ್ನು ಮೀರುತ್ತದೆ ಎಂದು ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ) ವರದಿ ಮಾಡಿದೆ.

- Advertisement -

ಫೆ. 6 ರಂದು ಸಂಭವಿಸಿದ ಭೂಕಂಪದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಒಟ್ಟು 52,000 ಜನರು ಸಾವನ್ನಪ್ಪಿದ್ದು, ಸಾವಿರಾರು ಮನೆಗಳು ಮತ್ತು ಇತರ ಕಟ್ಟಡಗಳು ನಾಶವಾಗಿದ್ದವು. ಅವುಗಳ ಪುನಃಸ್ಥಾಪನೆ ಸೇರಿದಂತೆ ದೇಶವು ಭಾರೀ ವೆಚ್ಚವನ್ನು ಭರಿಸಬೇಕಾಗುತ್ತದೆ.

ದುರಂತದಿಂದ ಪಾರಾದ ಸುಮಾರು 20 ಲಕ್ಷ ಜನರು ಪ್ರದೇಶದಿಂದ ವಲಸೆ ಹೋಗಿ ತಾತ್ಕಾಲಿಕ ವಸತಿ ಕಂಡುಕೊಂಡಿದ್ದಾರೆ ಎಂದು ಟರ್ಕಿ ಸರ್ಕಾರ ದೃಢಪಡಿಸಿದೆ. ಸುಮಾರು 15 ಲಕ್ಷ ಜನರು ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಏತನ್ಮಧ್ಯೆ, ಸುಮಾರು 46,000 ಜನರು ಕಂಟೈನರ್ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಉಳಿದವರು ವಸತಿ ನಿಲಯಗಳು ಮತ್ತು ಅತಿಥಿ ಗೃಹಗಳಲ್ಲಿ ತಂಗಿದ್ದಾರೆ.

Join Whatsapp