ಸರ್ಕಾರವೇ ಭ್ರಷ್ಟಾಚಾರಿಗಳ ಪರ ನಿಂತರೆ ರಾಜ್ಯವನ್ನು ಕಾಪಾಡುವುದು ಯಾರು?: ಅಬ್ದುಲ್ ಮಜೀದ್ ಮೈಸೂರು ಪ್ರಶ್ನೆ

Prasthutha|

ಬೆಂಗಳೂರು: ಸರ್ಕಾರವೇ ಭ್ರಷ್ಟಾಚಾರಿಗಳ ಪರ ನಿಂತರೆ ರಾಜ್ಯವನ್ನು ಕಾಪಾಡುವುದು ಯಾರು? ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಪ್ರಶ್ನಿಸಿದ್ದಾರೆ.

- Advertisement -

ಈ ಕುರಿತು ಸರ್ಕಾರವೇ ಭ್ರಷ್ಟಾಚಾರಿಗಳ ಪರ ಈ ಪರಿ ನಿಂತರೆ ಈ ರಾಜ್ಯವನ್ನು ಕಾಪಾಡುವುದು ಯಾರು?
ಭ್ರಷ್ಟಾಚಾರ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಉಸಿರು. ಅದು ನಿಲ್ಲದಂತೆ ಎಲ್ಲ ರೀತಿಯ ತಂತ್ರ ಕುತಂತ್ರಗಳನ್ನು ಅದು ನಿರಂತರ ಮಾಡುತ್ತಲೇ ಇರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಂಚ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಎಸ್ಕೆಪ್ ಆಗಿದ್ದ ವೇಳೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿರುವಾಗಲೇ ತನಿಖಾಧಿಕಾರಿಗಳ ಬದಲಾವಣೆಯಾಗಿರವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೇವಲ ನಾಲ್ಕು ದಿನದಲ್ಲಿ ಇಬ್ಬರು ತನಿಖಾಧಿಕಾರಿಗಳನ್ನು ಸರಕಾರ ಬದಲಾವಣೆ ಮಾಡಿತ್ತು.

- Advertisement -

ಮಾಡಾಳ್ ವಿರೂಪಾಕ್ಷ ಅವರಿಗೆ ಇಂದು(ಮಾ.7) ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ವಿಚಾರಣೆ ವೇಳೆ ಲೋಕಾಯುಕ್ತ ವಕೀಲರ ಮೇಲೆ ಜಡ್ಜ್​ ಬೇಸರ ವ್ಯಕ್ತಪಡಿಸಿದ್ದು, ಹಿರಿಯ ವಕೀಲರು ಏಕೆ ವಾದ ಮಂಡಿಸಲು ಹಾಜರಾಗಿಲ್ಲ ಎಂದು ಲೋಕಾ ಪರ ಹಾಜರಾದ ಕಿರಿಯ ವಕೀಲರನ್ನು ಜಡ್ಜ್​​​ ಪ್ರಶ್ನಿಸಿ ಜಾಮೀನು ನೀಡಿದ್ದರು.

Join Whatsapp