ಇಸ್ಲಾಂ ಸ್ವೀಕರಿಸಿದ ಡಚ್ ಫುಟ್ಬಾಲ್ ದಂತಕಥೆ ಕ್ಲಾರೆನ್ಸ್ ಸೀಡಾರ್ಫ್

Prasthutha|

ದುಬೈ: ಡಚ್ ಫುಟ್ಬಾಲ್ ದಂತಕಥೆ ಮಾಜಿ ಎಸಿ ಮಿಲನ್, ರಿಯಲ್ ಮ್ಯಾಡ್ರಿಡ್ ಮತ್ತು ಅಜಾಕ್ಸ್ ಮಿಡ್ ಫೀಲ್ಡರ್ ಆಗಿರುವ ಕ್ಲಾರೆನ್ಸ್ ಸೀಡಾರ್ಫ್ ಅವರು ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ.

- Advertisement -

 ಕ್ಲಾರೆನ್ಸ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಇಸ್ಲಾಂ ಸ್ವೀಕರಿಸಿರುವುದಾಗಿ ಘೋಷಿಸಿದರು. ‘ನಾನು ಮುಸ್ಲಿಂ ಕುಟುಂಬಕ್ಕೆ ಸೇರಿರುವುದನ್ನು ಆಚರಿಸಿದ ಎಲ್ಲಾ ಉತ್ತಮ ಸಂದೇಶಗಳಿಗೆ ವಿಶೇಷ ಧನ್ಯವಾದಗಳು’ ಎಂದು ಕ್ಲಾರೆನ್ಸ್ ಸೀಡಾರ್ಫ್ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.

ಯುಇಎಫ್ ಎ ಚಾಂಪಿಯನ್ಸ್ ಲೀಗ್ ಇತಿಹಾಸದಲ್ಲಿ ಮೂರು ವಿಭಿನ್ನ ಕ್ಲಬ್ ಗಳೊಂದಿಗೆ ಚಾಂಪಿಯನ್ಸ್ ಲೀಗ್ ಗೆದ್ದ ಏಕೈಕ ಆಟಗಾರ ಸೀಡಾರ್ಫ್ ಆಗಿದ್ದಾರೆ. ಇದು ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೂ ಸಾಧಿಸಲಾಗದ ಸಾಧನೆಯಾಗಿದೆ.

- Advertisement -

‘ಪ್ರಪಂಚದಾದ್ಯಂತವಿರುವ ನನ್ನ ಎಲ್ಲಾ ಸಹೋದರ ಸಹೋದರಿಯರೊಂದಿಗೆ, ವಿಶೇಷವಾಗಿ ನನಗೆ ಇಸ್ಲಾಮಿನ ಸಂದೇಶವನ್ನು ಹೆಚ್ಚು ಆಳವಾಗಿ ಕಲಿಸಿದ ನನ್ನ ಪ್ರೀತಿಯ ಪತ್ನಿ ಸೋಫಿಯಾರೊಂದಿಗೆ ಸೇರುತ್ತಿರುವುದರಲ್ಲಿ ನನಗೆ ತುಂಬಾ ಸಂತೋಷವಿದೆ. ನಾನು ನನ್ನ ಹೆಸರನ್ನು ಬದಲಾಯಿಸಲಿಲ್ಲ, ನನ್ನ ಪೋಷಕರು ನನಗೆ ನೀಡಿದ ಕ್ಲಾರೆನ್ಸ್ ಸೀಡಾರ್ಫ್ ಎಂಬ ಹೆಸರಿನಲ್ಲೇ ಮುಂದುವರಿಯುತ್ತೇನೆ. ನಾನು ನನ್ನ ಎಲ್ಲಾ ಪ್ರೀತಿಯನ್ನು ವಿಶ್ವದ ಎಲ್ಲರಿಗೂ ಕಳುಹಿಸುತ್ತಿದ್ದೇನೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

Join Whatsapp