ವಿರಾಜಪೇಟೆ | ಬೈಕ್, ಆಟೋ ಡಿಕ್ಕಿ: ಬೈಕ್ ಸವಾರ ಸಾವು

Prasthutha|

ವಿರಾಜಪೇಟೆ: ಬೈಕ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಪಟ್ಟಣದ ವಿನಾಯಕ ನಗರ ತಿರುವಿನಲ್ಲಿ ನಡೆದಿದೆ.

- Advertisement -

ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಕಾವಾಡಿ ಗ್ರಾಮದ ನಿವಾಸಿ ಕೊಳವಂಡ ರಾಜ ಪೆಮ್ಮಯ್ಯ (58) ಮೃತ ಪಟ್ಟ ದುರ್ದೈವಿಯಾಗಿದ್ದು, ಪಟ್ಟಣದಿಂದ ದಿನಸಿ ಖರೀದಿಸಿ ಮನೆಗೆ ಮರಳುತ್ತಿದ್ದ ವೇಳೆ ಅಮ್ಮತ್ತಿಯಿಂದ ವಿರಾಜಪೇಟೆಗೆ ಆಗಮಿಸುತ್ತಿದ್ದ ಆಟೋ ನಡುವೆ ಡಿಕ್ಕಿ ಸಂಭವಿಸಿ ಸಾವನ್ನಪ್ಪಿದ್ದಾರೆ. ಆಟೋ ಕೂಡ ಮಗುಚಿಕೊಂಡ ಪರಿಣಾಮ ಆಟೋ ಚಾಲಕ ಟಿ.ಟಿ. ರಾಜನ್ ಅವರ ತಲೆಗೂ ಗಂಭೀರ ಗಾಯವಾಗಿದ್ದು, ವಿರಾಜಪೇಟೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp