ಉಕ್ರೇನ್’ನಿಂದ ತಾಯ್ನಾಡಿಗೆ ಮರಳಿದ ಚಿಕ್ಕಬಳ್ಳಾಪುರದ ವೈದ್ಯಕೀಯ ವಿದ್ಯಾರ್ಥಿನಿ ಐಮನ್ ಬುಶ್ರಾ

Prasthutha|

ಚಿಕ್ಕಬಳ್ಳಾಪುರ: ಉಕ್ರೇನ್’ನಲ್ಲಿ ಎಂಬಿಬಿಎಸ್ ಅಧ್ಯಯನ ಮಾಡಲು ಹೋಗಿದ್ದ ಬಾಗೇಪಲ್ಲಿ ತಾಲೂಕು ಚೇಳೂರಿನ ಎಂ.ಎಸ್.ನೂರ್ ಅಹಮದ್ ಅವರ ಪುತ್ರಿ ಐಮನ್ ಬುಶ್ರಾ ಎಂಬುವವರು ಗುರುವಾರ ರಾತ್ರಿ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

- Advertisement -

ನಾವು ಇರುವ ಕಡೆಯಿಂದ ಲಿವಿವ್ ಸಿಟಿಗೆ ಉಕ್ರೇನ್ ಸರ್ಕಾರ 500 ಕಿ.ಮೀ .ಉಚಿತ ವಿಶೇಷ ರೈಲು ವ್ಯವಸ್ಥೆ ಮಾಡಿತ್ತು. ಭಯದ ವಾತಾವರಣದಲ್ಲಿ ನಾವು ಹೇಗೋ ಕಷ್ಟ ಪಟ್ಟು ರೈಲು ನಿಲ್ದಾಣದ ಬಳಿ ಬಂದು ರೈಲು ಹತ್ತಲು ಮುಂದಾದೆವು. ಆದರೆ, ಉಕ್ರೇನ್ ಜನರು ನಿಮ್ಮ ಭಾರತದ ಸರ್ಕಾರ ನಮ್ಮೊಂದಿಗೆ ಸಹಕರಿಸಿಲ್ಲ ಎಂಬ ಉದ್ದೇಶದಿಂದ ನಮ್ಮನ್ನು ರೈಲು ಹತ್ತಲು ಬಿಡಲಿಲ್ಲ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಸುಮಾರು 40 ರೈಲುಗಳಲ್ಲಿ ಹತ್ತಲು ಬಿಡದೇ ಹಿಂಸೆ ನೀಡಿದರು. ಆದರೂ ನಾವು ಹೇಗೋ ಗುಂಪಿನಲ್ಲಿ ಒಂದೊಂದು ರೈಲಿಗೆ 50-100 ವಿದ್ಯಾರ್ಥಿಗಳು ಸೇರಿ ಅವರ ಕಣ್ಣು ತಪ್ಪಿಸಿಕೊಂಡು ಲಿವಿವ್ ಸಿಟಿಗೆ ಬಂದು ಸೇರಿದವು. ಆದರೆ, ಇಲ್ಲಿಯ ಹೋಟೆಲ್ ಗಳಲ್ಲಿ ನಮ್ಮಗೆ ಆದ್ಯತೆ ನೀಡದೇ ಕೇವಲ ಉಕ್ರೇನ್ ಅವರಿಗೆ ಮಾತ್ರ ಮೊದಲ ಆದ್ಯತೆ ನೀಡಿ ಸೇರಿಸಿಕೊಂಡರು. ನಮಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡಲಿಲ್ಲ ಎಂದು ಐಮನ್ ಬುಶ್ರಾ ತಿಳಿಸಿದ್ದಾರೆ.

Join Whatsapp