ಕೇಂದ್ರದ ದುರಾಡಳಿತದಿಂದಾಗಿ ಪೆಟ್ರೋಲ್ ಕೂಡ ಪಡಿತರ ರೀತಿಯಲ್ಲಿ ಹಂಚಬೇಕಾದ ಪರಿಸ್ಥಿತಿ ಬಂದಿದೆ: ಯು.ಟಿ. ಖಾದರ್

Prasthutha|

►► ನೂರು ಏರಿಸಿ, ಮೂರು ಇಳಿಸಿದ ಬಿಜೆಪಿ ಸರ್ಕಾರ

- Advertisement -

ಬೆಂಗಳೂರು: ಕೇಂದ್ರ ಸರಕಾರದ ದುರಾಡಳಿತದಿಂದಾಗಿ ಪೆಟ್ರೋಲ್, ಡೀಸೆಲ್ ಪಡಿತರದಂತೆ ನೀಡುವ ಪದ್ಧತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಇನ್ನು ದೇಶದಲ್ಲಿ ಹೇಗೋ ಎಂದು ಮಾಜೀ ಮಂತ್ರಿ ಯು.ಟಿ. ಖಾದರ್ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.


ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ತೈಲದ ಮೇಲೆ ರೂ. 3 ತೆರಿಗೆ ಇದ್ದರೆ ಈಗ 30 ರೂ. ಇದೆ. ಮನಮೋಹನ್ ಸಿಂಗ್ ಕಾಲದಲ್ಲಿ ಒಂದೂವರೆ ಲಕ್ಷ ಕೋಟಿ ಸಬ್ಸಿಡಿ ನೀಡಿದ್ದರಿಂದ ತೈಲ ಕಂಪೆನಿಗಳು ಲಾಭದಿಂದಿದ್ದವು. ಈಗ ಸಬ್ಸಿಡಿ ಇಲ್ಲ, ಅಬಕಾರಿ ಸುಂಕ 30% ಏರಿಕೆ ಮಾಡಿ ಕಂಪೆನಿಗಳು ಕೇಳಿದವರಿಗೆ ಅಗತ್ಯದಷ್ಟು ಪೆಟ್ರೋಲ್, ಡೀಸೆಲ್ ನೀಡುತ್ತಿಲ್ಲ ಎಂದರೆ ಅಭಿವೃದ್ಧಿ ಎಲ್ಲಿಗೆ ಮುಟ್ಟಲಿದೆ ಎಂದು ಖಾದರ್ ಪ್ರಶ್ನಿಸಿದರು.

- Advertisement -


ಖಾಸಗಿ ಕಂಪೆನಿಗಳು ಬಂಕ್ ತೆರೆದು ಮುಚ್ಚಿಕೊಂಡು ಹೋಗಿವೆ. ಸರಕಾರಿ ಸ್ವಾಮ್ಯದ ಕಂಪೆನಿಗಳು ರೇಷನ್ ಎನ್ನುತ್ತಿವೆ. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಬರುತ್ತಿರುವುದರಿಂದ ಮೋದಿ ಸರಕಾರವು ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ನಾಟಕ ನಡೆಸಿದೆ. ನೂರು ಏರಿಸಿ, ಮೂರು ಇಳಿಸಿ ರಾಜಕೀಯ ಮಾಡಿದರೆ ಜನರಿಗೇನು ಪ್ರಯೋಜನ ಎಂದು ಖಾದರ್ ಕೇಳಿದರು.


ಲೌಡ್ ಸ್ಪೀಕರ್ ನಿಷೇಧದ ಬಗ್ಗೆ ಮಾತನಾಡಿದ ಅವರು, ಆಟ, ಕೋಲ, ಉರೂಸ್, ಚರ್ಚ್ ಊರ್ಬಲಿ ಎಲ್ಲ ವೈವಿಧ್ಯತೆಗೆ ತಡೆ ಒಡ್ಡಿದರೆ ಜನರಲ್ಲಿ ವೈವಿಧ್ಯಮಯ ಸಂಸ್ಕೃತಿ ಉಳಿಯುವುದು ಹೇಗೆ? ಪೊಲೀಸರು ಯಾವುದೇ ನಿಯಮ ಬಂದಿಲ್ಲ ಎಂದಿದ್ದಾರೆ. ಒಟ್ಟಾರೆ ಜನರ ಆಚರಣೆಗಳಿಗೆ ತೊಂದರೆ ಇಲ್ಲದಂತೆ ನಡೆದುಕೊಳ್ಳಲಿ ಎಂದು ಖಾದರ್ ಸಲಹೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಇಬ್ರಾಹಿಂ ಕೋಡಿಜಾಲ್, ಸದಾಶಿವ ಉಲ್ಲಾಳ್, ಕಲಾವತಿ, ಮೋನಾಕ ಮೊದಲಾದವರು ಉಪಸ್ಥಿತರಿದ್ದರು

Join Whatsapp