ಪತ್ರಕರ್ತ ಝಾಕಿರ್ ಅಲಿ ತ್ಯಾಗಿ ಮೀರತ್ ಪ್ರವೇಶಿಸದಂತೆ ನಿರ್ಬಂಧಿಸಿದ ನ್ಯಾಯಾಲಯ

Prasthutha|

ಲಕ್ನೋ: ಮೀರತ್’ಗೆ ಮೂರು ತಿಂಗಳ ಕಾಲ ಪ್ರವೇಶಿಸದಂತೆ ಪತ್ರಕರ್ತ ಝಾಕಿರ್ ಅಲಿ ತ್ಯಾಗಿ ವಿರುದ್ಧ ಉತ್ತರ ಪ್ರದೇಶದ ನ್ಯಾಯಾಲಯ ನಿರ್ಬಂಧ ಹೇರಿದೆ.

- Advertisement -

ಮೀರತ್’ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ತ್ಯಾಗಿ ಅವರು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಬಹುದು ಎಂದು ಆರೋಪಿಸಿ ಗೂಂಡಾ ನಿಯಂತ್ರಣ ಕಾಯ್ದೆಯಡಿ ಈ ಆದೇಶವನ್ನು ಹೊರಡಿಸಿದ್ದಾರೆ.

ಗೋಹತ್ಯೆ ಪ್ರಕರಣದಲ್ಲಿ ತ್ಯಾಗಿ ಅವರ ಪಾಲ್ಗೊಳ್ಳುವಿಕೆಯು ಅವರ ಹಳ್ಳಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. “ಅಂತಹ ವ್ಯಕ್ತಿಯನ್ನು ಸಮಾಜದಲ್ಲಿ ಮುಕ್ತವಾಗಿ ತಿರುಗಾಡಲು ಬಿಡುವುದು ಗ್ರಾಮದಲ್ಲಿನ ಭದ್ರತೆ ಮತ್ತು ಶಾಂತಿಗೆ ಗಂಭೀರ ಬೆದರಿಕೆಯಾಗಿದೆ” ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ಝಾಕಿರ್ ಅಲಿ ತ್ಯಾಗಿ ತನ್ನ ವಾದವನ್ನು ಆಲಿಸದೆ ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ ಎಂದು ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ.

ನನ್ನ ನಿಜವಾದ ಅಪರಾಧವೆಂದರೆ ನಾನು ಪತ್ರಿಕೋದ್ಯಮದಲ್ಲಿ ಕೆಲಸಮಾಡುತ್ತಿರುವುದು. 100 ಅಪರಾಧಿಗಳನ್ನು ಖುಲಾಸೆಗೊಳಿಸಿದರೂ ಸಹ, ಯಾವುದೇ ನಿರಪರಾಧಿಯನ್ನು ಶಿಕ್ಷಿಸಬಾರದು ಎಂದು ನ್ಯಾಯಾಂಗದ ತತ್ವಗಳನ್ನು ಆಗಾಗ್ಗೆ ಹೇಳಲಾಗುತ್ತದೆ. ಆದರೆ ಈಗ ಎಷ್ಟೇ ಮುಗ್ಧ ಜನರನ್ನು ಶಿಕ್ಷಿಸಿದರೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬಾರದು ಎಂಬುದು ಈಗಿನ ನ್ಯಾಯಾಂಗದ ತತ್ವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ತ್ಯಾಗಿ ವಿರುದ್ಧ ಉತ್ತರ ಪ್ರದೇಶ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು

Join Whatsapp