ಸೌದಿ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ಬಾಂಬ್ ದಾಳಿ !

Prasthutha|

ನೈರುತ್ಯ ಸೌದಿ ಅರೇಬಿಯಾದ ಅಭಾ ವಿಮಾನ ನಿಲ್ದಾಣದ ಮೇಲೆ ಬಾಂಬ್ ಯುಕ್ತ ಡ್ರೋಣ್ ದಾಳಿ ನಡೆದಿದೆ. ಈ ಬಾಂಬ್ ದಾಳಿಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಅಧಿಕೃತ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಡ್ರೋಣ್ ದಾಳಿಯಿಂದಾಗಿ ಒಂದು ನಾಗರಿಕ ವಿಮಾನವೂ ಭಾಗಶಃ ಹಾನಿಗೊಂಡಿದೆ. ಅಭಾ ನಿಲ್ದಾಣದ ಮೇಲೆ  ಕಳೆದ 24 ಗಂಟೆಗಳ ಅವಧಿಯೊಳಗೆ ನಡೆದ ಎರಡನೇ ಡ್ರೋಣ್ ದಾಳಿ ಇದಾಗಿದೆ.

ಈ ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೂ ಇರಾನ್ ಬೆಂಬಲಿತ ಯೆಮೆನ್ ಬಂಡುಕೋರರು ಈ ದಾಳಿಯನ್ನು ನಡೆಸಿದ್ದಾರೆ ಎಂದು ಸಂಶಯಿಸಲಾಗಿದೆ.

- Advertisement -